Asianet Suvarna News Asianet Suvarna News

ವಿಧಾನಮಂಡಲ ಅಧಿವೇಶನ: ಕಾಂಗ್ರೆಸ್ ಅಸ್ತ್ರಕ್ಕೆ, ತಿರುಗೇಟು ನೀಡಲು ಬಿಜೆಪಿ ಸಿದ್ಧತೆ

Sep 14, 2021, 9:40 AM IST

ಬೆಂಗಳೂರು (ಸೆ. 14): ಇಂದಿನಿಂದ ವಿಧಾನಮಂಡಲ ಅಧಿವೇಶನ ರಂಗೇರಲಿದೆ. ಕಾಂಗ್ರೆಸ್ ಪ್ರಶ್ನೆಗಳಿಗೆ ಉತ್ತರ ಕೊಡಲು ಕಮಲಪಡೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. 

'ಸದನದಲ್ಲಿ ಸರ್ಕಾರಕ್ಕೆ ಮುಜುಗರವಾಗುವ ಪ್ರಶ್ನೆ ಕೇಳ್ಬೇಡಿ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಬಿಎಸ್‌ವೈ ಶಾಸಕರಿಗೆ ಮನವಿ ಮಾಡಿದ್ದಾರೆ. 

ಜೆಡಿಎಸ್ ಶಾಸಕರಿಗೆ ಸುಮಲತಾ ಬುದ್ದಿಮಾತು, ಬಿಜೆಪಿಯ ಅಚ್ಚರಿ ರಣತಂತ್ರ!

ಕೋವಿಡ್ ವ್ಯಾಕ್ಸಿನ್ ಬಗ್ಗೆ ನಳೀನ್ ಕುಮಾರ್ ಕಟೀಲ್ ಶಾಸಕರಿಗೆ ಕಟುವಾಗಿ ಮಾತನಾಡಿದ್ದಾರೆ. 'ನಿಮ್ಮ ಕ್ಷೇತ್ರದಲ್ಲಿ ವ್ಯಾಕ್ಸಿನ್ ನೀಡಿ ನಿಮ್ಮ ಫೋಟೋ ಹಾಕ್ತೀರಿ. ಅಸಲಿಗೆ ಕೊರೊನಾ ಲಸಿಕೆ ನೀಡಿದ್ದು ಪ್ರಧಾನಿ ಮೋದಿ. ಮೋದಿಯವರ ಫೋಟೋವನ್ನು ಹಾಕಿ ಎಂದು ಶಾಸಕರಿಗೆ ತಾಕೀತು ಮಾಡಿದ್ದಾರೆ.