Asianet Suvarna News Asianet Suvarna News

ಜೆಡಿಎಸ್ ಶಾಸಕರಿಗೆ ಸುಮಲತಾ ಬುದ್ಧಿಮಾತು, ಬಿಜೆಪಿಯ ಅಚ್ಚರಿ ರಣತಂತ್ರ!

Sep 13, 2021, 11:29 PM IST

ಬೆಂಗಳೂರು(ಸೆ. 13)  ಇಂದಿನಿಂದ ಕರ್ನಾಟಕ ವಿಧಾನಸಭೆ ಅಧಿವೇಶನ ಪ್ರಾರಂಭವಾಗಿದ್ದು, ಮೊದಲ ದಿನದ ಕಲಾಪದಲ್ಲಿ ದರ ಏರಿಕೆ ವಿಚಾರ ರ್ಚೆಯಾಯಿತು  ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡೀಸ್ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ ಕಳೆದ ಹಲವು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್(80) ನಿಧನರಾಗಿದ್ದಾರೆ.

ಬಿಜೆಪಿ ಸಭೆ ಇನ್ ಸೈಡ್ ಡಿಟೇಲ್ಸ್

ಸಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆಯನ್ನು ತಡೆಯಲು ಸಾಧ್ಯವಿಲ್ಲ. ಜೆಡಿಎಸ್ ನಾಯಕರು ಸಲ್ಲದ ವಿಚಾರ ಚರ್ಚೆ ಮಾಡುವ ಬದಲು ಸದನದಲ್ಲಿ ಜನಕ್ಕೆ ಒಳಿತಾಗುವ ವಿಚಾರ ಮಾತನಾಡಲಿ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸವಾಲು ಹಾಕಿದ್ದಾರೆ.  ಕಾಂಗ್ರೆಸ್ ಬೆಲೆ ಏರಿಕೆಯನ್ನು ಅಸ್ತ್ರ ಮಾಡಿಕೊಂಡಿದೆ. ಇದಕ್ಕೆ ಉತ್ತರವಾಗಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದು ಯುಪಿಎ ಅವಧಿಯ ಬೆಲೆ ಏರಿಕೆ ಅಂಕಿ-ಅಂಶ ಮುಂದಿಟ್ಟು ತಿರುಗೇಟು ಕೊಡುವ ನಿರ್ಧಾರ ಮಾಡಲಾಗಿದೆ ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ