Big 3: ತುಕ್ಕು ಹಿಡಿದ ಕಬ್ಬಿಣ, ಬಿರುಕು ಬಿಟ್ಟ ಓವರ್‌ ಹೆಡ್ ಟ್ಯಾಂಕ್:‌ ಜೀವಭಯದಲ್ಲಿ ಗ್ರಾಮದ ಜನರು!

ಕೋಲಾರ ತಾಲೂಕಿನ ಹೋಳುರು, ಗಟ್ಟಹಳ್ಳಿ, ಮಾರೇನಹಳ್ಳಿ ಗ್ರಾಮಗಳಲ್ಲಿ ವಾಟರ್‌ ಟ್ಯಾಂಕ್‌ ತುಕ್ಕುಹಿಡಿದಿದ್ದು, ಮೂರು ಗ್ರಾಮದ ಜನರು  ಜೀವಭಯದಲ್ಲಿದ್ದಾರೆ.

 

First Published Jul 12, 2022, 8:55 PM IST | Last Updated Jul 12, 2022, 8:55 PM IST

ಬೆಂಗಳೂರು (ಜುಲೈ 12): ಕೋಲಾರ ಗ್ರಾಮದ ಹೋಳುರು, ಗಟ್ಟಹಳ್ಳಿ, ಮಾರೇನಹಳ್ಳಿಯ ಗ್ರಾಮಗಳ ಜನರು ಜೀವಭಯದಲ್ಲಿ ಓಡಾಡುತ್ತಿದ್ದಾರೆ. ಅದಕ್ಕೆ ಕಾರಣವಾಗಿರುವುದು ತುಕ್ಕು ಹಿಡಿದು, ಬಿರುಕುಬಿಟ್ಟಿರುವ ವಾಟರ್‌ ಟ್ಯಾಂಕ್‌. 2012-13ರಲ್ಲಿ ನಿರ್ಮಾಣವಾಗಿರುವ ಕುಡಿಯುವ ನೀರಿನ ಬೃಹತ್ ಟ್ಯಾಂಕ್‌ಗಳಿವು. ಒಂದೊಂದು ಓವರ್‌ ಹೆಡ್‌ ಟ್ಯಾಂಕ್‌ಗಳಿಗೆ ಅಂದಾಜು 10 ಲಕ್ಷ ರೂಪಾಯಿ ಖರ್ಚು ಮಾಡಿ ಕಟ್ಟಿಸಲಾಗಿದೆ. ಆದರೆ, ಇದುವರೆಗೂ ಟ್ಯಾಂಕ್‌ಗಳು (Water Tank) ಉದ್ಘಾಟನೆಯಾಗದೇ ಈಗಲೂ ಆಗಲೋ ಬೀಳುವಂಥ ಸ್ಥಿತಿಗೆ ತಲುಪಿದೆ. ಇದಕ್ಕೆ ಕಾರಣ ಕಳಪೆ ಕಾಮಗಾರಿ. 50 ಸಾವಿರ ಲೀಟರ್‌ ನೀರನ್ನು ಹಿಡಿದಿಡುವ ಸಾಮರ್ಥ್ಯ ಈ ಟ್ಯಾಂಕ್‌ಗಳಿಗೆ ಇದೆ. ಆದರೆ, ಇದಕ್ಕೆ ಬಳಸಿರುವ ಕಬ್ಬಿಣಗಳು ಈಗಾಗಲೇ ತುಕ್ಕು ಹಿಡಿದಿವೆ. ಸಿಮೆಂಟ್‌ನ ಪಿಲ್ಲರ್‌ಗಳು ಬಿರುಕುಬಿಟ್ಟಿವೆ. ಟ್ಯಾಂಕ್‌ನ ಅಂಕಪಕ್ಕದಲ್ಲಿ ಓಡಾಡುವಾಗ ಇಲ್ಲಿನ ಜನ ಜೀವ ಕೈಯಲ್ಲಿ ಹಿಡಿದುಕೊಂಡೇ ಸಾಗುತ್ತಾರೆ. ಇನ್ನೇನು ಕೆಲವೇ ತಿಂಗಳಲ್ಲಿ ಅದಾಗಿ ಅದೇ ಬೀಳುವ ಹಾಗಿರುವ ಈ ಟ್ಯಾಂಕ್‌ಗಳ ಬಗ್ಗೆ ಕಂಪ್ಲೀಟ್‌ ರಿಪೋರ್ಟ್‌. 

ಇದನ್ನೂ ಓದಿ: BIG 3 Hero: ಗೋರಗುಂಟೆ ಪಾಳ್ಯದಲ್ಲಿ ಮೊಬೈಲ್‌ ಶೌಚಾಲಯ ನಿರ್ಮಿಸಿ ಮಾದರಿಯಾದ ಪಿಎಸ್ಐ ಶಾಂತಪ್ಪ