BIG 3 ವರದಿಗೂ ಮುನ್ನ ಇಂಪ್ಯಾಕ್ಟ್; ಸಿರಿವಾರದ ಹಳೆ ಹಾಸ್ಟೆಲ್ ಕಟ್ಟಡ ತೆರವು!
ಸಿರವಾರ ಪಟ್ಟಣದ ತಾಲೂಕು ಮಟ್ಟದ ಸರ್ಕಾರಿ ಪಿಯು ಕಾಲೇಜು ಅವ್ಯವಸ್ಥೆಯ ಆಗರವಾಗಿದೆ. ಈ ಕಾಲೇಜಿನಲ್ಲಿ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಾಲೇಜಿಗೆ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ. ಕಾಲೇಜಿಗೆ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ.
ರಾಯಚೂರು (ಜು. 20): ಸಿರವಾರ ಪಟ್ಟಣದ ತಾಲೂಕು ಮಟ್ಟದ ಸರ್ಕಾರಿ ಪಿಯು ಕಾಲೇಜು ಅವ್ಯವಸ್ಥೆಯ ಆಗರವಾಗಿದೆ. ಈ ಕಾಲೇಜಿನಲ್ಲಿ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಾಲೇಜಿಗೆ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ. ಕಾಲೇಜಿಗೆ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ.
BIG 3: ರಾಯಚೂರು ಸಿರವಾರ ವಿದ್ಯಾರ್ಥಿಗಳಿಗೆ ಕಂಟಕವಾಗಿರುವ ಹಳೆ ಹಾಸ್ಟೆಲ್ ಕಟ್ಟಡ!
ಶಾಲಾ ಕಾಲೇಜಿನ ಕಟ್ಟಡ ನಿರ್ಮಾಣಕ್ಕಾಗಿ ದಾನಿಗಳು 4 ಎಕರೆ ಜಾಗ ನೀಡಿದ್ರು. ಇಲ್ಲಿರುವ ಹಳೆ ಹಾಸ್ಟೆಲ್ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಹಳೆ ಕಟ್ಟಡವನ್ನು ತೆರವುಗೊಳಿಸಬೇಕು, ಇದರಿಂದ ನಮಗೆ ಆಟದ ಮೈದಾನ ಸಿಗುತ್ತಿದೆ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು. ಹಳೆ ಕಟ್ಟಡಗಳನ್ನು ತೆರವುಗೊಳಿಸುವಂತೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಕಾಲೇಜು ಮಂಡಳಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ವರದಿ ಪ್ರಸಾರ ಮಾಡುವುದಕ್ಕೆ ಬಿಗ್ 3 ಹೋಗುತ್ತದೆ.
ಈ ವಿಚಾರ ಸ್ಥಳೀಯ ಆಡಳಿತದವರಿಗೆ ಗೊತ್ತಾಗುತ್ತದೆ. ಕೂಡಲೇ ಎಚ್ಚೆತ್ತ ಆಡಳಿತ ವರ್ಗ ಕಟ್ಟಡವನ್ನು ತೆರವುಗೊಳಿಸಿದ್ದಾರೆ. ಹೀಗಾಗಿ ಬಿಗ್3 ಗೆ ವಿದ್ಯಾರ್ಥಿಗಳು ಥ್ಯಾಂಕ್ಸ್ ಹೇಳಿದ್ದಾರೆ.