BIG 3: ರಾಯಚೂರು ಸಿರವಾರ ವಿದ್ಯಾರ್ಥಿಗಳಿಗೆ ಕಂಟಕವಾಗಿರುವ ಹಳೆ ಹಾಸ್ಟೆಲ್‌ ಕಟ್ಟಡ!

ಸಿರವಾರ ಪಟ್ಟಣದ ತಾಲೂಕು ಮಟ್ಟದ ಸರ್ಕಾರಿ ಪಿಯು ಕಾಲೇಜು ಅವ್ಯವಸ್ಥೆಯ ಆಗರವಾಗಿದೆ.  ಈ ಕಾಲೇಜಿನಲ್ಲಿ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಾಲೇಜಿಗೆ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ.

First Published Jul 20, 2022, 1:21 PM IST | Last Updated Jul 20, 2022, 1:21 PM IST

ರಾಯಚೂರು (ಜು. 20): ಸಿರವಾರ ಪಟ್ಟಣದ ತಾಲೂಕು ಮಟ್ಟದ ಸರ್ಕಾರಿ ಪಿಯು ಕಾಲೇಜು ಅವ್ಯವಸ್ಥೆಯ ಆಗರವಾಗಿದೆ.  ಈ ಕಾಲೇಜಿನಲ್ಲಿ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಾಲೇಜಿಗೆ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ. ಕಾಲೇಜಿಗೆ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ. ಶಾಲಾ ಕಾಲೇಜಿನ ಕಟ್ಟಡ ನಿರ್ಮಾಣಕ್ಕಾಗಿ ದಾನಿಗಳು 4 ಎಕರೆ ಜಾಗ ನೀಡಿದ್ರು. ಇಲ್ಲಿರುವ ಹಳೆ ಹಾಸ್ಟೆಲ್ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಹಳೆ ಕಟ್ಟಡವನ್ನು ತೆರವುಗೊಳಿಸಬೇಕು, ಇದರಿಂದ ನಮಗೆ ಆಟದ ಮೈದಾನ ಸಿಗುತ್ತಿದೆ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು. ಹಳೆ ಕಟ್ಟಡಗಳನ್ನು ತೆರವುಗೊಳಿಸುವಂತೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಕಾಲೇಜು ಮಂಡಳಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.