Asianet Suvarna News Asianet Suvarna News

ರಷ್ಯಾದ ಶಿಖರದಲ್ಲಿ ಕನ್ನಡ ಡಿಂಡಿಮ, ಕೊರೋನಾ ವಾರಿಯರ್‌ಗಳಿಗೆ ಸಾಧನೆ ಅರ್ಪಿಸಿದ ಪರ್ವತಾರೋಹಿ

ಬೆಂಗಳೂರಿನ ನಿವಾಸಿ ಮತ್ತು ಟ್ರೆಕ್‌ನೋಮಡ್ಸ್‌ ಫೌಂಡೇಷನ್‌ ಸಂಸ್ಥಾಪಕ ನವೀನ್‌ ಮಲ್ಲೇಶ್‌ ಅವರು ರಷ್ಯಾದ ಅತ್ಯಂತ ಎತ್ತರದ ಶಿಖರ ‘ಮೌಂಟ್‌ ಎಲ್‌ಬ್ರಸ್‌’ ಏರಿ ಕನ್ನಡದ ಬಾವುಟ ಹಾರಿಸಿದ್ದಾರೆ.
 

ಬೆಂಗಳೂರು (ಸೆ. 29): ಟ್ರೆಕ್‌ನೋಮಡ್ಸ್‌ ಫೌಂಡೇಷನ್‌ ಸಂಸ್ಥಾಪಕ ನವೀನ್‌ ಮಲ್ಲೇಶ್‌ ಅವರು ರಷ್ಯಾದ ಅತ್ಯಂತ ಎತ್ತರದ ಶಿಖರ ‘ಮೌಂಟ್‌ ಎಲ್‌ಬ್ರಸ್‌’ ಏರಿ ಕನ್ನಡದ ಬಾವುಟ ಹಾರಿಸಿದ್ದಾರೆ.

ರಷ್ಯಾ ಪರ್ವತದಲ್ಲಿ ಕನ್ನಡದ ಬಾವುಟ ನೆಟ್ಟ ಬೆಂಗಳೂರಿಗ!

ಯುರೋಪ್‌ ಖಂಡದಲ್ಲೇ ಅತ್ಯಂತ ಎತ್ತರದ್ದಾಗಿರುವ, ರಷ್ಯಾದ 18,510 ಅಡಿ (5,642ಮೀಟರ್‌) ಎತ್ತರದ ಶಿಖರವೇರಿದ ನವೀನ್‌ ಕನ್ನಡ ಮತ್ತು ಭಾರತದ ಬಾವುಟ ಪ್ರದರ್ಶಿಸಿದ್ದಾರೆ. ರಷ್ಯಾದ ಶಿಖರದಲ್ಲಿ ಕನ್ನಡದ ಹೆಜ್ಜೆ ಮೂಡಿಸಿದ ನವೀನ್‌ ಚಾರಣದ ಹೆಮ್ಮೆಯನ್ನು ಕೊರೋನಾ ಫ್ರಂಟ್‌ಲೈನ್‌ ವಾರಿಯರ್ಸ್‌ಗಳಾದ ವೈದ್ಯರು, ದಾದಿಯರು, ಆಸ್ಪತ್ರೆ ಸಿಬ್ಬಂದಿ, ಪೊಲೀಸರು, ಪೌರಕಾರ್ಮಿಕರು ಸೇರಿದಂತೆ ಕೊರೋನಾ ಮುಂಚೂಣಿ ಕಾರ್ಯಕರ್ತರಿಗೆ ಅರ್ಪಿಸಿದ್ದಾರೆ. ಪರ್ವತಾರೋಹಣದ ಅನುಭವವನ್ನು ನವೀನ್, ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. 

Video Top Stories