ಬಾಂಗ್ಲಾ ಯುವತಿ ರೇಪ್‌ ಕೇಸ್‌ಗೆ ಟ್ವಿಸ್ಟ್, ಪ್ರಕರಣದಲ್ಲಿ ಪೊಲೀಸರೇ ಶಾಮೀಲು..?

- ಬಾಂಗ್ಲಾ ಯುವತಿ ಅತ್ಯಾಚಾರ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್

- ಹಣದಾಸೆಗೆ ಬಿದ್ದು ಕೇಸ್ ಮುಚ್ಚಿ ಹಾಕಿದ್ರಂತೆ ಪೊಲೀಸರು

- ಪ್ರಕರಣ ಮುಚ್ಚಿಹಾಕೋಕೆ ತಲಾ 20 ಸಾವಿರ ರೂ ಪಡೆದಿರುವ ಆರೋಪ 

First Published May 30, 2021, 10:18 AM IST | Last Updated May 30, 2021, 10:23 AM IST

ಬೆಂಗಳೂರು (ಮೇ. 30): ಬಾಂಗ್ಲಾ ಯುವತಿ ಅತ್ಯಾಚಾರ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ವಿಚಾರಣೆ ವೇಳೆ ಕೆಲವು ಆಘಾತಕಾರಿ ವಿಚಾರ ಬಯಲಾಗಿದೆ. ಅತ್ಯಾಚಾರ ಪ್ರಕರಣ ಕೆಆರ್‌ ಪುರ ಹಾಗೂ ರಾಮಮೂರ್ತಿನಗರ ಪೊಲೀಸರಿಗೆ ಗೊತ್ತಿತ್ತಂತೆ. ದುಡ್ಡಿನಾಸೆಗೆ ಬಿದ್ದು ಕೇಸ್ ಮುಚ್ಚಿ ಹಾಕಿದ್ದರಂತೆ. ಪ್ರಕರಣ ಮುಚ್ಚಿಹಾಕೋಕೆ ತಲಾ 20 ಸಾವಿರ ರೂ ಪಡೆದಿರುವ ಆರೋಪ ಕೇಳಿಬಂದಿದೆ. ಹಣ ಪಡೆದು ರೈಲು ಹತ್ತಿಸಿ ಸಂತ್ರಸ್ತೆಯನ್ನು ಕೇರಳಕ್ಕೆ ಕಳುಹಿಸಿದ್ದರಂತೆ ಪೊಲೀಸರು. 

ಗ್ಯಾಂಗ್ ರೇಪ್ ಬೆನ್ನತ್ತಿದಾಗ ಬಯಲಾದ ಸತ್ಯಗಳು..!