Asianet Suvarna News Asianet Suvarna News

Mid-Day Meal: ಬಿಜೆಪಿ ಸರ್ಕಾರವನ್ನ ಸುತ್ತಿಕೊಳ್ಳುತ್ತಿದ್ಯಾ ಮತ್ತೊಂದು ವಿವಾದ?

Dec 2, 2021, 11:42 AM IST
  • facebook-logo
  • twitter-logo
  • whatsapp-logo

ಬೆಂಗಳೂರು(ಡಿ.02): ಬಿಜೆಪಿ ಸರ್ಕಾರವನ್ನ ಸುತ್ತಿಕೊಳ್ಳುತ್ತಿದೆಯಾ ಮತ್ತೊಂದು ವಿವಾದ?. ಹೌದು, ಮಕ್ಕಳ ಅರೋಗ್ಯ ವೃದ್ಧಿಗಾಗಿ ಜಾರಿಗೆ ತಂದಿದ್ದ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಪ್ರತಿಭಟನೆಗೆ ಮಣಿದು ಆದೇಶವನ್ನ ಹಿಂದಕ್ಕೆ ಪಡೆಯುತ್ತಾ ಸರ್ಕಾರ?. ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಮೊಟ್ಟೆ ಹಾಗೂ ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ನೀಡಲು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆದರೆ, ಸರ್ಕಾರದ ಈ ಕಾರ್ಯಕ್ರಮವನ್ನ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಡಿ.1 ರಿಂದ ಮಾ. 30 ರವರೆಗೆ ಯೋಜನೆಯನ್ನ ಜಾರಿಗೆ ತರಲು ತೀರ್ಮಾನಿಸಲಾಗಿತ್ತು. ಹೈದ್ರಾಬಾದ್‌ ಕರ್ನಾಟಕ 7 ಜಿಲ್ಲೆಗಳಲ್ಲಿ ಹೊಸ ಯೋಜನೆ ಜಾರಿಗೆ ಯೋಜನೆ ಹಾಕಿಕೊಂಡಿದೆ. 7 ಜಿಲ್ಲೆಗಳ 14 ಲಕ್ಷ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಮಾಡಲಿದೆ. 

SR Vishwanath Murder Conspiracy: ದೂರು ಕೊಡುವಲ್ಲಿಯೇ ಎಡವಿದರಾ ಶಾಸಕ..?

Video Top Stories