Asianet Suvarna News Asianet Suvarna News

Padma Award: ಪ್ರಶಸ್ತಿಯಿಂದ ಇನ್ನಷ್ಟು ಕೃಷಿ ಕೆಲಸ ಮಾಡಲು ಹುಮ್ಮಸ್ಸು ಬಂದಿದೆ: ಅಬ್ದುಲ್ ಖಾದರ್

ಧಾರವಾಡ (Dharwad) ಜಿಲ್ಲೆ ಅಣ್ಣಿಗೇರಿಯ ಅಬ್ದುಲ್‌ಖಾದರ್‌ ಇಮಾಮಸಾಬ ನಡಕಟ್ಟಿನ ರೈತರ ಬಲಗೈ ಎನ್ನಿಸಿಕೊಳ್ಳುವಷ್ಟರ ಮಟ್ಟಿಗೆ 24 ಕೃಷಿ ಸಲಕರಣೆಗಳನ್ನು ರೂಪಿಸಿ ನಡಕಟ್ಟಿನ ಸಾಹೇಬ್ರು ಎನ್ನಿಸಿಕೊಂಡಿದ್ದಾರೆ.

ಬೆಂಗಳೂರು (ಜ. 26): ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸಾಧನೆಗೈದ ಐದು ಜನ ಕನ್ನಡಿಗರಿಗೆ ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಪದ್ಮ ಗೌರವಗಳನ್ನು ಪ್ರಕಟಿಸಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕಾಗಿ ಸುಬ್ಬಣ್ಣ ಅಯ್ಯಪ್ಪನ್‌, ಕಲಾ ವಿಭಾಗದಲ್ಲಿ ಎಚ್‌.ಆರ್‌.ಕೇಶವಮೂರ್ತಿ, ಅವಿಷ್ಕಾರ ವಿಭಾಗದಲ್ಲಿ ಅಬ್ದುಲ್‌ ಖಾದರ್‌ ನಾಡಕಟ್ಟಿನ್‌ ಮತ್ತು ಸಾಹಿತ್ಯ, ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಸಿದ್ದಲಿಂಗಯ್ಯ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಗೌರವ ಪ್ರಕಟಿಸಲಾಗಿದೆ

ಪ್ರಶಸ್ತಿಗಾಗಿ ಕೆಲಸ ಮಾಡಿಲ್ಲ, ಬಮದಿರುವುದು ಖುಷಿ ಕೊಟ್ಟಿದೆ: ಅಮೈ ಮಹಾಲಿಂಗ ನಾಯ್ಕ

.ಧಾರವಾಡ ಜಿಲ್ಲೆ ಅಣ್ಣಿಗೇರಿಯ ಅಬ್ದುಲ್‌ಖಾದರ್‌ ಇಮಾಮಸಾಬ ನಡಕಟ್ಟಿನ ರೈತರ ಬಲಗೈ ಎನ್ನಿಸಿಕೊಳ್ಳುವಷ್ಟರ ಮಟ್ಟಿಗೆ 24 ಕೃಷಿ ಸಲಕರಣೆಗಳನ್ನು ರೂಪಿಸಿ ನಡಕಟ್ಟಿನ ಸಾಹೇಬ್ರು ಎನ್ನಿಸಿಕೊಂಡಿದ್ದಾರೆ. 'ಸಾಮಾನ್ಯ ರೈತನೊಬ್ಬನಿಗೆ ಪ್ರಶಸ್ತಿ ಬಂದಿರುವುದು ಖುಷಿ ಕೊಟ್ಟಿದೆ. ಪುರಸ್ಕಾರದಿಂದ ಕೆಲಸ ಮಾಡಲು ಹುಮ್ಮಸ್ಸು ಬಂದಿದೆ. ನಮ್ಮನ್ನು ಗುರುತಿಸಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು' ಎಂದು ಅಬ್ದುಲ್ ಖಾದರ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

Video Top Stories