Asianet Suvarna News Asianet Suvarna News

ರಾಜ್ಯದ 10 ಡ್ಯಾಮ್’ಗಳು ಬಣಬಣ: ಮಳೆಗಾಲದ ಬದಲಿಗೆ ಬರಗಾಲ

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆ ವಿಳಂಬವಾಗಿದ್ದು, ತುಂಗೆ, ಶರಾವತಿ, ಕೃಷ್ಣೆ ಹಾಗೂ ಮಲಪ್ರಭಾ ನದಿಗಳು ಸುಡುವ ಬಿಸಿಲಿಗೆ ಬಣಬಣ ಎನ್ನುತ್ತಿವೆ. ಬರದ ಪರಿಣಾಮದಿಂದ ರಾಜ್ಯದ 10 ಡ್ಯಾಮ್’ಗಳು ನೀರಿಲ್ಲದೇ ಖಾಲಿಯಾಗಿವೆ.

ರಾಜ್ಯದಲ್ಲಿ ಮುಂಗಾರು ಮಳೆ ಈ ಬಾರಿ ಸ್ವಲ್ಪ ತಡವಾಗಿದೆ. ಮಳೆ ಇವತ್ತು ಸುರಿಯುತ್ತೆ, ನಾಳೆ ಸುರಿಯುತ್ತೆ ಅಂತ ಕಾದಿದ್ದೇ ಆಯ್ತು. ಮಳೆ ಸುರಿಯೋ ಲಕ್ಷಣ ಮಾತ್ರ ಕಾಣಿಸ್ತಿಲ್ಲ. ಬದಲಾಗಿ ಸುಡೋ ಸುಡು ಸೂರ್ಯನ ತಾಪಮಾನ ಒಂದೇ ಸಮನೆ ಏರುತ್ತಾ ಹೋಗುತ್ತಿದೆ. ಇದರ ಪರಿಣಾಮ ಇಂದು ಮಳೆಗಾಲದ ಬದಲಿಗೆ ಬರಗಾಲ ನೋಡ್ಬೇಕಾಗಿದೆ. ಇದೇ ಬರಗಾಲದ ಪರಿಣಾಮದಿಂದ ನೀರಿನಿಂದ ತುಂಬಿ ಕಂಗೊಳಿಸಬೇಕಾಗಿದ್ದ ಡ್ಯಾಮ್’ಗಳು, ಈಗ ನೀರಿಲ್ಲದೇ ಬಣಗುಡ್ತಿದೆ. ಮಳೆಯೇ ಆಗದಿದ್ದ ಪರಿಣಾಮ, ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗಿದೆ. ಒಂದು ಕಡೆ ಮಳೆಯಾಗ್ತಿಲ್ಲ, ಇನ್ನೊಂದು ಕಡೆ ಡ್ಯಾಮ್’ನಲ್ಲಿ ನೀರೇ ಇಲ್ಲ. ಪರಿಣಾಮ ಕೃಷಿ ಚಟುವಟಿಕೆಗಳಲ್ಲ ಈಗ ಸ್ತಬ್ಧವಾಗಿ ಹೋಗಿದೆ. ಇದರಿಂದ ರೈತ ಅಕ್ಷರಶಃ ಕಂಗಾಲಾಗಿ ಹೋಗಿದ್ದಾನೆ. ಇನ್ನು ಧಗಧಗಿಸೋ ಬಿಸಿಲಿಗೆ ಕಂಗಾಲಾಗಿರೋ ಜನ, ಮಳೆ ಆದರೆ ಸಾಕು ಅಂತ ಕಾಯ್ತಿದ್ದಾರೆ.


 

Video Top Stories