Asianet Suvarna News Asianet Suvarna News

ಉಪ್ಪಿ, ಧ್ರುವ, ವಿಜಯ್, ಸುದೀಪ್ ಸಿನಿಮಾಗಳೆಲ್ಲ ರೆಡಿ: ಸ್ಟಾರ್ಸ್ ಚಿತ್ರಗಳ ಬಿಡುಗಡೆ ದಿನಾಂಕ ಗುಟ್ಟಾಗಿರೋದೇಕೆ?

ಪ್ಯಾನ್ ಇಂಡಿಯಾ ಜಮಾನ ಶುರುವಾದ ಮೇಲೆ ಎಲ್ಲವೂ ಬದಲಾಗಿದೆ. ಸ್ಟಾರ್ ಗಳು ಮೂರು ವರ್ಷಕ್ಕೆ ಒಂದು ಸಿನಿಮಾ ಮಾಡ್ತಿದ್ದಾರೆ. ಸಿನಿಮಾ ಶುರುವಾದ ಮೇಲೆ ಶೂಟಿಂಗ್ ಮುಗಿಯೋ ತನಕ ಯಾವ ಅಪ್ಡೇಟ್ಸು ಕೊಡಲ್ಲ.

ಪ್ಯಾನ್ ಇಂಡಿಯಾ ಜಮಾನ ಶುರುವಾದ ಮೇಲೆ ಎಲ್ಲವೂ ಬದಲಾಗಿದೆ. ಸ್ಟಾರ್ ಗಳು ಮೂರು ವರ್ಷಕ್ಕೆ ಒಂದು ಸಿನಿಮಾ ಮಾಡ್ತಿದ್ದಾರೆ. ಸಿನಿಮಾ ಶುರುವಾದ ಮೇಲೆ ಶೂಟಿಂಗ್ ಮುಗಿಯೋ ತನಕ ಯಾವ ಅಪ್ಡೇಟ್ಸು ಕೊಡಲ್ಲ. ಶೂಟಿಂಗ್ ಮುಗಿಸಿ, ರಿಲೀಸ್ ಗೆ ರೆಡಿಯಾಗಿದ್ರು ಬಿಡುಗಡೆ ದಿನಾಂಕ ಹೇಳದೆ ಗಪ್ ಚುಪ್ ಅಂತ ಸುಮ್ನಾಗಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಐದು ಜನ ಟಾಪ್​ ಸ್ಟಾರ್​ಗಳ ಸಿನಿಮಾಗಳು ಶೂಟಿಂಗ್ ಮುಗಿಸಿ ಬಿಡುಗಡೆಗೆ ರೆಡಿ ಆಗಿದ್ದಾರೆ. ಆದ್ರೆ ರಿಲೀಸ್​ ಡೇಟ್ ಮಾತ್ರ ಫಿಕ್ಸ್​​ ಮಾಡದೇ ಸೈಲೆಂಟ್ ಆಗಿದ್ದಾರೆ. ಕನ್ನಡದಲ್ಲಿ ಈ ವರ್ಷ ಸ್ಟಾರ್​​ ಸಿನಿಮಾಗಳು ಬಂದು ಹಾವಳಿ ಮಾಡಿಲ್ಲ. ಇಷ್ಟು ದಿನ ಎಲ್ಲರೂ ಶೂಟಿಂಗ್​ ಸೆಟ್​ನಲ್ಲೇ ಇದ್ರು. 

ಆದ್ರೆ ಈಗ ಶೂಟಿಂಗ್ ಆಗಿದೆ. ಬಟ್​ ಯಾರೂ ಸಿನಿಮಾ ರಿಲೀಸ್ ಮಾಡೋ ಬಗ್ಗೆ ಬಾಯ್​ ಬಿಡುತ್ತಿಲ್ಲ. ಬಿಡುಗಡೆಗೆ ರೆಡಿಯಾಗಿರೋ ಸಿನಿಮಾಗಳ ಲೀಸ್ಟ್​ನಲ್ಲಿ ಮೊದಲಿಗ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ಧ್ರುವನ ಎರಡು ಸಿನಿಮಾಗಳ ಶೂಟಿಂಗ್ ಮುಗಿದಿದೆ. ಧ್ರುವ ಮಾರ್ಟಿನ್ ಹಾಗು ಕೆಡಿ ಸಿನಿಮಾಗಳ ಕೆಲಸ ಮುಗಿಸಿದ್ದಾರೆ. ಆದ್ರೆ ರಿಲೀಸ್​ ಬಗ್ಗೆ ಮಾತ್ರ ಯಾವ್ ಸುಳಿವನ್ನೂ ಕೊಡುತ್ತಿಲ್ಲ. ಇನ್ನು ರಿಯಲ್ ಸ್ಟಾರ್ ಉಪೇಂದ್ರ. ಉಪ್ಪಿಯ ಯುಐ ಸಿನಿಮಾ ಶೂಟಿಂಗ್ ಕೂಡ ಮುಗಿದಿದೆ. ಉಪ್ಪಿ ಯುಐ ಸಿನಿಮಾ ರಿಲೀಸ್ ಮಾಡೋ ಬಗ್ಗೆ ಯಾವ್ ಮಾತು ಆಡುತ್ತಿಲ್ಲ. ಯುಐ ಬಿಟ್ಟು ಏ ಸಿನಿಮಾ ರೀ ರಿಲೀಸ್ ಮಾಡುತ್ತಿದ್ದಾರೆ.

ಇನ್ನು ನಟ ದುನಿಯಾ ವಿಜಯ್ ಭೀಮನಾಗಿ ಬರೋದು ಯಾವಾಗ.? ಈ ಪ್ರಶ್ನೆಯನ್ನ ವಿಜಯ್ ಡೈಹಾರ್ಡ್ ಫ್ಯಾನ್ಸ್​​ ಕೇಳ್ತಾನೆ ಇದ್ದಾರೆ. ಆದ್ರೆ ವಿಜಯ್ ಮಾತ್ರ ಭೀಮ ರಿಲೀಸ್​ ಬಗ್ಗೆ ಪ್ಲಾನ್ ಮಾಡ್ತಾನೆ ಇದ್ದಾರೆ. ಭೀಮ ಬಿಡುಗಡೆಗೆ ಸರಿಯಾದ ಡೇಟ್​​ ಇನ್ನೂ ಸಿಕ್ಕಿಲ್ಲವಂತೆ. ಆ ಕಡೆ ಕಿಚ್ಚ ಸುದೀಪ್ ಎರಡು ದಿನದ ಹಿಂದೆ ಮಹಾಬಲಿಪುರಂ ನಲ್ಲಿ ಮ್ಯಾಕ್ಸ್ ಶೂಟಿಂಗ್ ಮುಗಿಸಿದ್ದಾರೆ. ಮ್ಯಾಕ್ಸ್​ ಬಗ್ಗೆ ಭಾರಿ ನಿರೀಕ್ಷೆ ಇದೆ. ಆದ್ರೆ ಈ ಸಿನಿಮಾದ ಒಂದು ಟೀಸರ್ ಬಿಟ್ರೆ ಮತ್ತಿನ್ನೇನು ಹೊರ ಬಂದಿಲ್ಲ. ಹೀಗಾಗಿ ಸುದೀಪ್ ಫ್ಯಾನ್ಸ್​ ಮ್ಯಾಕ್ಸ್ ರಿಲೀಸ್ ಅಪ್ಡೇಟ್ ಕೊಡಿ ಅಂತ ಕೇಳ್ತಾನೆ ಇದ್ದಾರೆ. 

ಭಟ್ ಕಿಚ್ಚ ಮಾತ್ರ ಮ್ಯಾಕ್ಸ್​ ರಿಲೀಸ್​ ಸೀಕ್ರಿಟ್​ಅನ್ನ ಮುಚ್ಚಿಟ್ಟುಕೊಂಡೇ ಇದ್ದಾರೆ. ಕನ್ನಡ ಸಿನಿಮಾಗಳಿಗೆ ಒಟಿಟಿಯಲ್ಲಿ ಮಾರ್ಕೆಟ್ ಇಲ್ಲ ಅನ್ನೋ ಮಾತಿದೆ. ಅದು ನಿಜ ಅನ್ನಿಸುತ್ತಿದೆ. ಯಾಕಂದ್ರೆ ಯಾವ ಸ್ಟಾರ್​ ಸಿನಿಮಾಗಳನ್ನ ಒಟಿಟಿ ಮಂದಿ ಕೊಂಡುಕೊಳ್ಳುತ್ತಿಲ್ಲ. ಕನ್ನಡದ ಸಿನಿಮಾಗಳಗೆ ಬ್ಯುಸಿನೆಸ್​ ಕೊಡುತ್ತಿಲ್ಲವಂತೆ. ಆ ಕಡೆ ಥಿಯೇಟರ್​ಗೆ ಪ್ರೇಕ್ಷಕ ಬರುತ್ತಿಲ್ಲ. ಹೀಗಾಗಿ ಕನ್ನಡದಲ್ಲಿ ಸ್ಟಾರ್ಸ್​ ಸಿನಿಮಾಗಳು ತೆರೆ ಕಾಣೋಕೆ ಹಿಂದೆ ಮುಂದೆ ನೋಡುತ್ತಿವೆ. ಇದೆಲ್ಲಾ ಸರಿ ಹೋಗಿ ಸ್ಟಾರ್​ ಸಿನಿಮಾಗಳು ರಿಲೀಸ್ ಆಗ್ಲಿ ಅಂತ ಎಲ್ಲಾ ಹೀರೋಗಳ ಫ್ಯಾನ್ಸ್​ ಕಾಯುತ್ತಿದ್ದಾರೆ. 

Video Top Stories