Vikrant Rona: ಒಟಿಟಿ ಆಫರ್ ಬೆನ್ನಲ್ಲೇ ಟೀಸರ್ ರಿಲೀಸ್ ಮುಂದೂಡಿಕೆ?
ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ 'ವಿಕ್ರಾಂತ್ ರೋಣ' ಕೂಡ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕೋ ಅನಿವಾರ್ಯತೆಯಲ್ಲಿದೆ. ಈ ಮಧ್ಯೆಯೂ ಕಿಚ್ಚನ 'ವಿಕ್ರಾಂತ್ ರೋಣ' ಬಗ್ಗೆ ಇಂಟರೆಸ್ಟಿಂಗ್ ಸಂಗಂತಿಯೊಂದು ರಿವಿಲ್ ಆಗಿದೆ.
ಕೋವಿಡ್ (Covid19) ಮೂರನೇ ಅಲೆಗೆ ಚಿತ್ರರಂಗ ಅನಿಶ್ಚಿತತೆಯಲ್ಲಿ ಕಾಲ ಕಳೆಯುವಂತಾಗಿದೆ. ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ದಿನಾಂಕ ಮುಂದೂಡುತ್ತಿವೆ. ಇದೀಗ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ 'ವಿಕ್ರಾಂತ್ ರೋಣ' (Vikrant Rona) ಕೂಡ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕೋ ಅನಿವಾರ್ಯತೆಯಲ್ಲಿದೆ. ಈ ಮಧ್ಯೆಯೂ ಕಿಚ್ಚನ 'ವಿಕ್ರಾಂತ್ ರೋಣ' ಬಗ್ಗೆ ಇಂಟರೆಸ್ಟಿಂಗ್ ಸಂಗಂತಿಯೊಂದು ರಿವಿಲ್ ಆಗಿದೆ. ಅನೂಪ್ ಭಂಡಾರಿ (Anup Bhandari) ಹಾಗೂ ಕಿಚ್ಚ ಸುದೀಪ್ (Kichcha Sudeep) ಕಾಂಬಿನೇಷನ್‌ನಲ್ಲಿ ಈ ಚಿತ್ರ ಮೂಡಿ ಬಂದಿದೆ. ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಆಗುತ್ತಿರುವುದರಿಂದ 'ವಿಕ್ರಾಂತ್ ರೋಣ' ಟೀಸರ್ ಹೊರ ಬರುತ್ತಿಲ್ಲ.
ಸಾಹೋ ನಿರ್ದೇಶಕರ ಜೊತೆ Kiccha Sudeep ಸಿನಿಮಾ ಮಾಡ್ತಿಲ್ವಾ?
ಅಷ್ಟೆ ಅಲ್ಲ 100% ಸೀಟು ಬರ್ತಿಗೆ ಅವಕಾಶ ಸಿಗೋವರೆಗೂ ಚಿತ್ರ ರಿಲೀಸ್ ಮಾಡದೇ ಇರೋದಕ್ಕೆ ಚಿತ್ರತಂಡ ನಿರ್ಧರಿಸಿದೆ. 'ವಿಕ್ರಾಂತ್ ರೋಣ' ಸಿನಿಮಾದ ಪ್ರಸಾರ ಹಕ್ಕುಗಳಿಗಾಗಿ ಎರಡು ಒಟಿಟಿ (OTT) ಸಂಸ್ಥೆಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿ ಇಂಗ್ಲಿಷ್ ಭಾಷೆಯಲ್ಲೂ ನೇರವಾಗಿ ಒಟಿಟಿಯಲ್ಲಿ ಪ್ರಸಾರ ಮಾಡಲು ಓಟಿಟಿ ಸಂಸ್ಥೆಯೊಂದು 100 ಕೋಟಿ ಆಫರ್ 'ವಿಕ್ರಾಂತ್ ರೋಣ'ನ ಮುಂದಿಟ್ಟಿದ್ದಾರೆ. ಆದರೆ ಸಿನಿಮಾವನ್ನ ಒಟಿಟಿಗೆ ಕೊಡಬೇಕಾ ಬೇಡ್ವಾ ಅನ್ನೋ ಬಗ್ಗೆ ಸಿನಿಮಾದ ನಿರ್ಮಾಪಕ ಜಾಕ್ ಮಂಜು (Jack Manju) ಇದುವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment