Asianet Suvarna News Asianet Suvarna News

Madhagaja: ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದ ಟ್ರೈಲರ್

ಇತ್ತೀಚಿನ ವರ್ಷಗಳಲ್ಲಿ ಶ್ರೀಮುರಳಿ(Srimurali) ಆಯ್ಕೆ ಮಾಡಿಕೊಳ್ಳುವ ಸಿನಿಮಾ(Cinema) ಪ್ಯಾಟರ್ನ್ ಬದಲಾಗಿದೆ. ಅವರ ಸಿನಿಮಾ ಎಂದರೆ ಆ್ಯಕ್ಷನ್ಗೆ ಕೊರತೆ ಇರುವುದಿಲ್ಲ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈಗ ಅವರು ನಟಿಸುತ್ತಿರುವ ಮದಗಜ  ಸಿನಿಮಾ ಬೆಟ್ಟದಷ್ಟು ನಿರೀಕ್ಷೆ ಹುಟ್ಟು ಹಾಕಿದೆ.

ನವೆಂಬರ್ 19 ರಿಲೀಸ್ ಆದ ಮದಗಜ(Madagaja) ಟ್ರೇಲರ್ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಸಿನಿಮಾದಲ್ಲಿ (Cinema)ಆ್ಯಕ್ಷನ್ಗೆ ಯಾವುದೇ ಕೊರತೆ ಇಲ್ಲ ಎಂಬುದಕ್ಕೆ 2 ನಿಮಿಷ 53 ಸೆಕೆಂಡ್ಗಳ ಟ್ರೇಲರ್ ಸಾಕ್ಷಿಯಾಗಿದೆ. ಆಕ್ಷನ್ ಜೊತೆಗೆ ತಾಯಿ ಸೆಂಟಿಮೆಂಟ್ ಕೂಡ ಸಿನಿಮಾದಲ್ಲಿರುವ ಸೂಚನೆಯನ್ನ ಟ್ರೈಲರ್ ನೀಡಿದೆ.

ಸ್ಯಾಂಡಲ್ ವುಡ್ ನಲ್ಲಿ ಮದಗಜ ಹವಾ ಎಬ್ಬಿಸುತ್ತಿದ್ದಾನೆ.  ಒಂದೇ ಗಂಟೆಯಲ್ಲಿ ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಯನ್ನು ಮದಗಜ ಟ್ರೇಲರ್ ಪಡೆದುಕೊಂಡಿದೆ. ಮಹೇಶ್ ಕುಮಾರ್ ನಿರ್ದೇಶನ, ಉಮಾಪತಿ ಶ್ರೀನಿವಾಸ್ ನಿರ್ಮಾಣ,. ಶ್ರೀಮುರಳಿ  ಮತ್ತು ಆಶಿಕಾ ರಂಗನಾಥ್ ನಟನೆಯ ಚಿತ್ರ ಮದಗಜ ಡಿಸೆಂಬರ್  3  ರಂದು ಕನ್ನಡ ತೆಲುಗು, ತಮಿಳು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಮದಗಜ ಟ್ರೈಲರ್ ಲಾಂಚ್ ಮಾಡಿದ ಸಿಎಂ ಹಾಲಿವುಡ್ ಸಿನಿಮಾದ ಹಾಗೆ ಕಾಣುತ್ತದೆ ಮುರಳಿನ ನೋಡಿದ್ರೆ. ಸೂಪರ್ ಡೂಪರ್ ಹಿಟ್ ಆಗಲಿದೆ ಮದಗಜ ಎಂದು ಸಿಎಂ ಬಸವರಾಜ ಬೊಮ್ಮಾಯಿ  ಭವಿಷ್ಯ ನುಡಿದರು.

1500 ಥಿಯೇಟರ್‌ಗಳಲ್ಲಿ ಶ್ರೀಮುರಳಿ 'ಮದಗಜ' ಸಿನಿಮಾ ರಿಲೀಸ್?

ಮದಗಜ ಸಿನಿಮಾದ ಒಂದೊಂದು ಫ್ರೇಮ್ ಅಧ್ಬುತವಾಗಿದೆ. ಜಗಪತಿ ಬಾಬು ಟಾಲಿವುಡ್ನ ಖ್ಯಾತ ಖಳನಟ. ಅವರು ಕೂಡ ಈ ಸಿನಿಮಾದಲ್ಲಿ ಮುಖ್ಯ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ತುಂಬಾನೇ ರಾ ಆಗಿದೆ. ಕೆಲ ದೃಶ್ಯಗಳು ಮೈ ಜುಮ್ ಎನಿಸುತ್ತವೆ. ಇನ್ನು, ಮಚ್ಚುಗಳು ಕೂಡ ಟ್ರೇಲರ್ನಲ್ಲಿ ಝಳಪಿಸಿವೆ.‘ಕೆಜಿಎಫ್’ ಸಿನಿಮಾದಲ್ಲಿ ಗರುಡನಾಗಿ ಕಾಣಿಸಿಕೊಂಡಿದ್ದ ರಾಮಚಂದ್ರ ರಾಜು ಅವರು ‘ಮದಗಜ’ದಲ್ಲಿ ನಟಿಸಿದ್ದಾರೆ. ಅವರ ಪಾತ್ರ ಕೂಡ ತುಂಬಾನೇ ಮಹತ್ವ ಪಡೆದುಕೊಳ್ಳಲಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

Video Top Stories