Asianet Suvarna News Asianet Suvarna News

Shiva Rajkumar: ಓಟಿಟಿಯಲ್ಲಿ ಹೊಸ ದಾಖಲೆ ಸೃಷ್ಟಿಸಿದ 'ಭಜರಂಗಿ 2' ಸಿನಿಮಾ

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ 'ಭಜರಂಗಿ 2' ಚಿತ್ರ ಜೀ 5 ಓಟಿಟಿಯಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿದ್ದು, ಇದೀಗ ಈ ಸಿನಿಮಾ ಹೊಸ ದಾಖಲೆ ಸೃಷ್ಟಿಸಿದೆ. ಕನ್ನಡ ಸಿನಿಮಾಗಳು ಒಟಿಟಿಯಲ್ಲಿ ಅಷ್ಟು ಸೌಂಡ್ ಮಾಡಲ್ಲ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ 'ಭಜರಂಗಿ 2' ದಾಖಲೆಗಳ ಮೇಲೆ ದಾಖಲೆ ಮಾಡುತ್ತಿದೆ.

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ನಟನೆಯ 'ಭಜರಂಗಿ 2' (Bhajarangi 2) ಚಿತ್ರ ಜೀ 5 (Zee5) ಓಟಿಟಿಯಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿದ್ದು, ಇದೀಗ ಈ ಸಿನಿಮಾ ಹೊಸ ದಾಖಲೆ ಸೃಷ್ಟಿಸಿದೆ. ಕನ್ನಡ ಸಿನಿಮಾಗಳು ಒಟಿಟಿಯಲ್ಲಿ ಅಷ್ಟು ಸೌಂಡ್ ಮಾಡಲ್ಲ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ 'ಭಜರಂಗಿ 2' ದಾಖಲೆಗಳ ಮೇಲೆ ದಾಖಲೆ ಮಾಡುತ್ತಿದೆ. ಈ ಸಿನಿಮಾ ಜೀ 5ನಲ್ಲಿ ಬಿಡುಗಡೆಯಾದ 16 ದಿನಗಳಲ್ಲಿ ಭರ್ಜರಿ ದಾಖಲೆ (Record) ಮಾಡಿದೆ. ಹೌದು! ಡಿಸೆಂಬರ್ 23ರಂದು 'ಭಜರಂಗಿ 2' ಸಿನಿಮಾ ಜೀ 5 ಓಟಿಟಿಯಲ್ಲಿ ತೆರೆಕಂಡಿತ್ತು. 

ಶಿವಣ್ಣ ಒಬ್ರ ಇದ್ರೆ ಏನ್ ಮಾಡ್ತಾರೆ? ಯಾರಿಗೂ ಗೊತ್ತಿರದ 3 ವಿಚಾರಗಳಿವು!

ಮೊದಲ ಮೂರು ದಿನವೇ ಶಿವಣ್ಣನ ಸಿನಿಮಾವನ್ನು 5 ಕೋಟಿಗೂ ಅಧಿಕ ನಿಮಿಷಗಳ ಕಾಲ ವೀಕ್ಷಣೆ ಮಾಡಲಾಗಿತ್ತು. ಸ್ಯಾಂಡಲ್‌ವುಡ್‌ನಲ್ಲಿ ಈ ಮಟ್ಟಿಗೆ ಇಷ್ಟು ಕಡಿಮೆ ಸಮಯದಲ್ಲಿ ದಾಖಲೆ ಮಾಡಿದ ಮೊದಲ ಸಿನಿಮಾವೆಂಬ ಹೆಗ್ಗಳಿಕೆಗೆ 'ಭಜರಂಗಿ 2' ಪಾತ್ರವಾಗಿತ್ತು. ಈಗ 16ನೇ ದಿನಕ್ಕೆ ಮತ್ತೊಂದು ಮೈಲಿಗಲ್ಲು ತಲುಪಿದ್ದು, 10 ಕೋಟಿ ನಿಮಿಷ ವೀಕ್ಷಣೆ ಪಡೆದುಕೊಂಡಿದೆ. ಇನ್ನು ಎ ಹರ್ಷ (A.Harsha) ನಿರ್ದೇಶನದ ಈ ಸಿನಿಮಾದಲ್ಲಿ ಶಿವರಾಜ್‌ ಕುಮಾರ್‌ ಅವರಿಗೆ ಜಾಕಿ ಭಾವನಾ (Bhavana) ನಾಯಕಿಯಾಗಿದ್ದಾರೆ.  ಜಯಣ್ಣ-ಭೋಗೇಂದ್ರ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್​ ಜನ್ಯಾ (Arjun Janya) ಸಂಗೀತ ನಿರ್ದೇಶನ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories