Asianet Suvarna News Asianet Suvarna News

'ಬೈರಾಗಿ' ರಥ ಯಾತ್ರೆ ಆರಂಭ; ಬೆಂಗಳೂರಿಂದ ಮೈಸೂರಿಗೆ ಹೊರಟ ಸಿನಿಮಾತಂಡ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬೈರಾಗಿ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಜುಲೈ 1ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಈಗಾಗಲೇ ಸಿನಿಮಾತಂಡ ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿಯಾಗಿದೆ. ಇಂದಿನಿಂದ ಸಿನಿಮಾತಂಡ ಪ್ರಿ ರಿಲೀಸ್ ಯಾತ್ರೆ ಹಮ್ಮಿಕೊಂಡಿದೆ. ಬೆಂಗಳೂರಿನ ಗವಿಪುರಂನಿಂದ ಬೈರಾಗಿ ಯಾತ್ರೆ ಶುರುವಾಗಿದೆ. 

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬೈರಾಗಿ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಜುಲೈ 1ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಈಗಾಗಲೇ ಸಿನಿಮಾತಂಡ ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿಯಾಗಿದೆ. ಇಂದಿನಿಂದ ಸಿನಿಮಾತಂಡ ಪ್ರಿ ರಿಲೀಸ್ ಯಾತ್ರೆ ಹಮ್ಮಿಕೊಂಡಿದೆ.  ಬೆಂಗಳೂರಿನ ಗವಿಪುರಂನಿಂದ ಬೈರಾಗಿ ಯಾತ್ರೆ ಶುರುವಾಗಿದೆ. ಯಾತ್ರೆಗೂ ಮುನ್ನ ಬಂಡೀಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಇಡೀ ಸಿನಿಮಾತಂಡ ಪೂಜೆ ಸಲ್ಲಿಸಿದೆ. ಶಿವಣ್ಣ ಜೊತೆ ಡಾಲಿ ಧನಂಜಯ್, ಪೃಥ್ವಿ ಅಂಬರ್ ಸಾಥ್ ನೀಡಿದ್ದಾರೆ. ಬಿಡದಿ, ರಾಮನಗರ, ಮಂಡ್ಯ ಹಾಗೂ ಮೈಸೂರು ಮಾರ್ಗವಾಗಿ ಬೈರಾಗಿ ಯಾತ್ರೆ ಸಾಗಲಿದೆ. ನಾಳೆ ಸಂಜೆ ಚಾಮರಾಜನಗರದಲ್ಲಿ ಪ್ರಿ-ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಚಾಮರಾಜನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿಅದ್ದೂರಿಯಾಗಿ ಕಾರ್ಯಕ್ರಮ ನಡೆಯುತ್ತಿದೆ. 

Video Top Stories