Asianet Suvarna News Asianet Suvarna News

Puneeth Rajkumar: ಗಣರಾಜ್ಯೋತ್ಸವಕ್ಕೆ ಅಪ್ಪು ಕೊನೆಯ ಚಿತ್ರದ ಪೋಸ್ಟರ್ ರಿಲೀಸ್!

ಜೇಮ್ಸ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ವೇಗವಾಗಿ ನಡೆಯುತ್ತಿದೆ. ಡಿಐ, ಸಿಜಿ ಮತ್ತು ರಿ-ರೆಕಾರ್ಡಿಂಗ್ ಮಾಡುತ್ತಿದ್ದು, ಗಣರಾಜ್ಯೋತ್ಸವದಂದು ಚಿತ್ರದ ವಿಶೇಷ ಪೋಸ್ಟರ್ ರಿಲೀಸ್ ಮಾಡುವುದಾಗಿ ನಿರ್ದೇಶಕ ಚೇತನ ಕುಮಾರ್ ಹೇಳಿದ್ದಾರೆ.

ಸ್ಯಾಂಡಲ್‌ವುಡ್‌ನ ಮೇರುನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ನಿಧನರಾಗಿ ಬರೋಬ್ಬರಿ ಎರಡು ತಿಂಗಳ ಮೇಲಾಗಿದೆ. ಅಪ್ಪು ಇನ್ನಿಲ್ಲ ಎಂಬ ಸತ್ಯವನ್ನು ನಂಬಲು ಅಸಾಧ್ಯವಾಗಿದೆ. ಪುನೀತ್ ನಿಧನರಾಗುವುದಕ್ಕೂ ಮುನ್ನ ಅನೇಕ ಚಿತ್ರಗಳಲ್ಲಿ ಬ್ಯುಸಿಯಾಗಿದ್ದರು. ಅದರಲ್ಲಿ 'ಜೇಮ್ಸ್' (James) ಚಿತ್ರವೂ ಒಂದು. ಇದೀಗ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ವೇಗವಾಗಿ ನಡೆಯುತ್ತಿದೆ. ಡಿಐ, ಸಿಜಿ ಮತ್ತು ರಿ-ರೆಕಾರ್ಡಿಂಗ್ ಮಾಡುತ್ತಿದ್ದು, ಗಣರಾಜ್ಯೋತ್ಸವದಂದು (Republic Day) ವಿಶೇಷ ಪೋಸ್ಟರ್ (Special Poster) ರಿಲೀಸ್ ಮಾಡುವುದಾಗಿ ನಿರ್ದೇಶಕ ಚೇತನ ಕುಮಾರ್ (Chetan Kumar) ಹೇಳಿದ್ದಾರೆ.

'ಜೇಮ್ಸ್' ಚಿತ್ರಕ್ಕೆ ಪುನೀತ್‌ ಅವರದ್ದೇ ವಾಯ್ಸ್: ಚಿತ್ರತಂಡ ನಿರ್ಧಾರ

ಮಾರ್ಚ್ 17 ರಂದು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವಿದೆ. ಹೀಗಾಗಿ ಅಷ್ಟರಲ್ಲಿ 'ಜೇಮ್ಸ್' ಸಿನಿಮಾ ಕೆಲಸ ಮುಗಿಸುವುದು ನಮ್ಮ ಟಾರ್ಗೆಟ್ ಆಗಿದೆ. ಅದು ಕೊರೋನಾ (Corona) ಪರಿಸ್ಥಿತಿ ಮೇಲೆ ಅವಲಂಬಿತವಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಹಾಗೂ ಪುನೀತ್ ರಾಜ್‌ಕುಮಾರ್ ಅವರ ಭಾಗವನ್ನು ಹೊರತುಪಡಿಸಿ ಉಳಿದ ಎಲ್ಲಾ ಕಲಾವಿದರ ಡಬ್ಬಿಂಗ್ (Dubbing) ಅನ್ನು ಚಿತ್ರತಂಡವು ಪೂರ್ಣಗೊಳಿಸಿದೆ. 'ಜೇಮ್ಸ್' ಚಿತ್ರದಲ್ಲಿ ಪುನೀತ್‌ ವಿಶೇಷ ಸ್ಟಂಟ್ಸ್‌, ಹೈವೋಲ್ಟೇಜ್‌ ಆ್ಯಕ್ಷನ್‌ ಜೊತೆಗೆ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಸ್ಯಾಟಲೈಟ್ ಹಕ್ಕುಗಳು ಈಗಾಗಲೇ 15 ಕೋಟಿಗೆ ಮಾರಾಟವಾಗಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment