ShivaRajkumar: ಅಣ್ಣನ ಜೊತೆ ಸಿನಿಮಾ ಮಾಡೋ ಕನಸು ಕಂಡಿದ್ದ ಅಪ್ಪು: ನನಸಾಗದ ಅಣ್ಣಾವ್ರ ಮಕ್ಕಳ ಕನಸು
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮಣ್ಣ ಶಿವರಾಜ್ ಕುಮಾರ್ ಜೊತೆ ಸೇರಿ ಒಂದು ಸಿನಿಮಾ ಮಾಡುವ ಪ್ಲಾನ್ ಮಾಡಿದ್ರಂತೆ. ಅದಕ್ಕಾಗಿ ಒಂದೆರೆಡು ಕತೆಯನ್ನೂ ಕೇಳಿದ್ರಂತೆ ಅಪ್ಪು.
ಚಿತ್ರಮಂದಿರದಲ್ಲಿ ಶಿವಣ್ಣನ ವೇದ ಸಿನಿಮಾ ಅಬ್ಬರಿಸುತ್ತಿದೆ. ಬೆಳ್ಳಿತೆರೆ ಮೇಲೆ ವೇದನ ದರ್ಬಾರ್ ಕಂಡು ದೊಡ್ಮನೆ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲ. ಆ ಖುಷಿಯಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಇರುವಾಗ್ಲೆ, ಶಿವಣ್ಣ ಹಾಗೂ ಅಪ್ಪು ಕಂಡ ಕನಸೊಂದು ಕಮರಿ ಹೋದ ಕತೆಯನ್ನು ಶಿವಣ್ಣ ಬಿಚ್ಚಿಟ್ಟಿದ್ದಾರೆ.. ಅಪ್ಪು ಅನ್ನೋ ಅರಸ ಇದ್ದಿದ್ರೆ ಅಭಿಮಾನಿಗಳ ಅರಮನೆಗೆ ಸಾಲು ಸಾಲು ಸಿನಿಮಾಗಳ ತೋರಣ ರಾರಾಜಿಸ್ತಿತ್ತು. ಅದ್ರೆ ಅಪ್ಪು ಆಕಸ್ಮಿಕ ನಿಧನ ಅಣ್ಣಾವ್ರ ಮಕ್ಕಳ ಕನಸು, ಅಭಿಮಾನಿ ದೇವರುಗಳ ಆಶಾಗೋಪುರ ಕುಸಿದು ಬೀಳುವಂತೆ ಮಾಡಿದೆ. ಅಪ್ಪು ಸಾಲು ಸಾಲು ಚಿತ್ರಗಳಿಗೆ ಸಹಿ ಮಾಡಿದ್ರೂ ಆ ಕಥೆಗಳಿಗೆ ಈಗ ಬೇರೆ ನಾಯಕರ ಹುಡುಕಾಟ ನಡೆಯುತ್ತಿದೆ. ಇದೆಲ್ಲಾ ಒಂದು ಕಡೆ ಆದ್ರೆ ಮತ್ತೊಂದು ಕಡೆ ದೊಡ್ಮನೆ ಮಕ್ಕಳು ಶಿವಣ್ಣ ಅಪ್ಪು ಕಂಡ ಕನಸು ಕೂಡ ಕನಸಾಗೆ ಉಳಿದುಕೊಂಡಿದೆ. ಆ ಕನಸೇ ಪುನೀತ್ ಕಟ್ಟಿರೋ ಪಿ.ಆರ್.ಕೆ ಪ್ರೊಡಕ್ಷನ್ ಹಾಗೂ ಗೀತಾ ಶಿವರಾಜ್ ಕುಮಾರ್ ಕಟ್ಟಿರೋ ಗೀತಾ ಪಿಕ್ಚರ್ಸ್ ಬ್ಯಾನರ್ ನಲ್ಲಿ ಶಿವಣ್ಣ ಹಾಗೂ ಪುನೀತ್ ಒಟ್ಟಿಗೆ ಸಿನಿಮಾ ಮಾಡಬೇಕು ಅನ್ನೋ ಆಸೆ. ಈ ವಿಚಾರವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರೇ ರಿವೀಲ್ ಮಾಡಿದ್ದಾರೆ.