Premam Poojyam: 'ನೆನಪಿರಲಿ ಪ್ರೇಮ್' ಪ್ರೇಮ ಕಥೆಗೆ ಸಿನಿರಸಿಕರು ಫಿದಾ
ಶ್ರೀಹರಿ ಪಾತ್ರದಲ್ಲಿ ಸಿನಿಮಾ ಪೂರ್ತಿ ಇರುವ ಒಳ್ಳೆಯ ಹುಡುಗ. ಅತಿ ಒಳ್ಳೆಯತನವನ್ನು, ಅಸಾಧ್ಯ ಪ್ರೇಮವನ್ನು, ಅಸಹನೀಯ ನೋವನ್ನು, ಯಾವುದೋ ಒಂದು ಕ್ಷುಲ್ಲಕ ಗಳಿಗೆಯಲ್ಲಿ ಒಂದು ಹನಿ ಕಣ್ಣೀರನ್ನು ಪ್ರೇಮ್ ಅದ್ಭುತವಾಗಿ ದಾಟಿಸುತ್ತಾರೆ.
ನೆನಪಿರಲಿ ಪ್ರೇಮ್ (Prem) ಅಭಿನಯದ 'ಪ್ರೇಮಂ ಪೂಜ್ಯಂ' (Premam Poojyam) ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿರಸಿಕರು ಚಿತ್ರಕ್ಕೆ ಉತ್ತಮವಾದ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದು, 'ಪ್ರೇಮಂ ಪೂಜ್ಯಂ' ಪ್ರೇಮೋತ್ಸವವನ್ನು ಪ್ರೀತಿಸಿದ್ದಾರೆ. ಮುಖ್ಯವಾಗಿ ಪ್ರೇಮ್ ಅವರು ತಮ್ಮ 25ನೇ ಚಿತ್ರವು ವಿಶೇಷವಾಗಿರಬೇಕು ಎಂದು ಅಳೆದುತೂಗಿ ಈ ಚಿತ್ರದ ಪಾತ್ರವನ್ನು ಒಪ್ಪಿಕೊಂಡು ಅಭಿನಯಿಸಿದ್ದಾರೆ. ಶ್ರೀಹರಿ ಪಾತ್ರದಲ್ಲಿ ಸಿನಿಮಾ ಪೂರ್ತಿ ಇರುವ ಒಳ್ಳೆಯ ಹುಡುಗ. ಅತಿ ಒಳ್ಳೆಯತನವನ್ನು, ಅಸಾಧ್ಯ ಪ್ರೇಮವನ್ನು, ಅಸಹನೀಯ ನೋವನ್ನು, ಯಾವುದೋ ಒಂದು ಕ್ಷುಲ್ಲಕ ಗಳಿಗೆಯಲ್ಲಿ ಒಂದು ಹನಿ ಕಣ್ಣೀರನ್ನು ಪ್ರೇಮ್ ಅದ್ಭುತವಾಗಿ ದಾಟಿಸುತ್ತಾರೆ.
ಅವರು ಕುಸಿದು ಕುಳಿತಾಗ ನೋಡುಗನೂ ಮನಸ್ಸಲ್ಲೇ ಮಂಡಿಯೂರಿ ಕೂರಬೇಕು. ಒಂದು ಸುದೀರ್ಘ ನಿಟ್ಟುಸಿರನ್ನು ಆಚೆ ಹಾಕಬೇಕು. ಹಳದಿ ಎಲೆಗಳ ಮರಗಳು, ಕೆಂಪು ಹೂವಿನ ಗಿಡಗಳು, ಹಿತ ಅನ್ನಿಸುವ ಬೆಳದಿಂಗಳು, ಹಸಿರು ತುಂಬಿದ ಹಾದಿ, ಅವಳ ಮನೆಯ ಬೀದಿ ಎಲ್ಲವನ್ನೂ ಅತಿ ಸುಂದರವಾಗಿ ತೋರಿಸುತ್ತಾ ಅಮರ ಮಧುರ ಪ್ರೇಮವನ್ನು ಸಾರುವ ಕತೆಯೇ ಈ ಸಿನಿಮಾದ ಜೀವಾಳವಾಗಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment