Asianet Suvarna News Asianet Suvarna News

Ninasam Satish: ತಾನೇ ಕಥೆ ಹುಡುಕಿಕೊಂಡು ಸಿನಿಮಾ ಓಕೆ ಮಾಡಿದ ಸತೀಶ್!

ನಟ ನಿನಾಸಂ ಸತೀಶ್ ಅಭಿನಯದ ಹೊಸ ಸಿನಿಮಾ ಅಶೋಕ ಬ್ಲೇಡ್. ಇಂಟ್ರೆಸ್ಟಿಂಗ್ ಎನ್ನಿಸೋ ಟೈಟಲ್ ಮೂಲಕ ಪ್ರೇಕ್ಷಕರ ಮುಂದೆ ಬರಲು ಹೊರಟಿರೋ ಅಶೋಕ ಬ್ಲೇಡ್ ಕಥೆಯನ್ನ ಖುದ್ದು ಸತೀಶ್ ಅವ್ರೇ ಹುಡುಕಿಕೊಂಡು ಆಯ್ಕೆ ಮಾಡಿ ನಾನೇ ಆಕ್ಟ್ ಮಾಡುವುದಾಗಿ ಕೇಳಿಕೊಂಡರಂತೆ. 

ನಟ ನಿನಾಸಂ ಸತೀಶ್ (Ninasam Satish) ಅಭಿನಯದ ಹೊಸ ಸಿನಿಮಾ ಅಶೋಕ ಬ್ಲೇಡ್ (Ashoka Blade). ಇಂಟ್ರೆಸ್ಟಿಂಗ್ ಎನ್ನಿಸೋ ಟೈಟಲ್ ಮೂಲಕ ಪ್ರೇಕ್ಷಕರ ಮುಂದೆ ಬರಲು ಹೊರಟಿರೋ ಅಶೋಕ ಬ್ಲೇಡ್ ಕಥೆಯನ್ನ ಖುದ್ದು ಸತೀಶ್ ಅವ್ರೇ ಹುಡುಕಿಕೊಂಡು ಆಯ್ಕೆ ಮಾಡಿ ನಾನೇ ಆಕ್ಟ್ ಮಾಡುವುದಾಗಿ ಕೇಳಿಕೊಂಡರಂತೆ. ಅಷ್ಟರ ಮಟ್ಟಿಗೆ ಇಂಟ್ರೆಸ್ಟಿಂಗ್ ಆಗಿದೆ ಅಶೋಕ ಬ್ಲೇಡ್ ಸಿನಿಮಾ ಕಥೆ ಅನ್ನೊದು ಸತೀಶ್ ಅವ್ರ ಮಾತು. ಅಶೋಕ ಬ್ಲೇಡ್. ವರ್ತಕರು ಮತ್ತು ಕಾರ್ಮಿಕರ ನಡುವೆ ನಡೆಯುವ ಯುದ್ಧದ ಕುರಿತಾಗಿರೋ ಸಿನಿಮಾ. ನೀನಾಸಂ ಸತೀಶ್ ಇದೇ ಮೊದಲ ಬಾರಿಗೆ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕಾವ್ಯ ಶೆಟ್ಟಿ (Kavya Shetty) ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

777 Charlie; ಪ್ರೇಕ್ಷಕರ ಹೃದಯಗೆದ್ದಿರುವ ಚಾರ್ಲಿ ಬಗ್ಗೆ ಟ್ರೇನರ್ ಪ್ರಮೋದ್ ಹೇಳಿದ್ದೇನು?

ಈ ಯುದ್ಧದಲ್ಲಿ ಒಬ್ಬ ಸೂಪರ್ ಸ್ಟಾರ್ ಕಾಣಿಸಿಕೊಳ್ಳಲಿದ್ದಾರೆ. ಉತ್ತರಖಾಂಡ, ಮುಂಬೈ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಈಗಾಗಲೇ ಚಿತ್ರೀಕರಣ ಶುರುವಾಗಿದ್ದು, ನಾನು ಜುಲೈನಲ್ಲಿ ಚಿತ್ರತಂಡ ಸೇರಿಕೊಳ್ಳಲಿದ್ದೇನೆ ಎನ್ನುತ್ತಾರೆ ನೀನಾಸಂ ಸತೀಶ್. ವೃದ್ಧಿ ಕ್ರಿಯೇಷನ್ಸ್ ಹಾಗೂ ಸತೀಶ್ ಪಿಕ್ಚರ್ ಹೌಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರಕ್ಕೆ ಟಿಕೆ ದಯಾನಂದ್ ಕಥೆ ಬರೆದಿದ್ರೆ ವಿನೋದ್ ದೋಂಡಾಳೆ ನಿರ್ದೇಶನ ಮಾಡುತ್ತಿದ್ದಾರೆ. ಅಶೋಕ ಬ್ಲೇಡ್ ಚಿತ್ರ ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಆಗಲಿದ್ದು, ಜುಲೈನಿಂದ ಶೂಟಿಂಗ್ ಶುರುವಾಗ್ತಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Video Top Stories