Asianet Suvarna News Asianet Suvarna News

ಅಪ್ಪನೇ ನನ್ನ ಹೀರೋ ಅಂದ ಸಪ್ತಮಿ ಗೌಡ: ಮಕ್ಕಳನ್ನು ಹೆಣ್ಣು ಎಂದು ಬೆಳೆಸಿಲ್ಲ ಎಂದ ತಂದೆ

ಅಪ್ಪ ತುಂಬಾ ಬ್ಯುಸಿಯಾಗಿ ಇರುತ್ತಿದ್ದರು. ಕೆಲಸದಲ್ಲಿ ಹುಟ್ಟು ಹಬ್ಬಕ್ಕೆ ಬಿಡುವು ಮಾಡಿಕೊಂಡು ಬರುತ್ತಿದ್ದರು ಎಂದು ನಟಿ ಸಪ್ತಮಿ ಗೌಡ ಹೇಳಿದರು.

First Published Jan 3, 2023, 5:27 PM IST | Last Updated Jan 3, 2023, 5:48 PM IST

ವರ್ಷದಲ್ಲಿ ಅಪ್ಪ ಐದು ದಿನ ಮಾತ್ರ ರಜೆ ತೆಗೆದುಕೊಳ್ಳುತ್ತಿದ್ದರು. ಆ ಐದು ದಿನಗಳಲ್ಲಿ ಟ್ರಿಪ್‌ ಹೋಗ್ತಾ ಇದ್ವಿ ಎಂದು ನಟಿ ಸಪ್ತಮಿ ಗೌಡ ಹೇಳಿದರು. ಮೊದಲು ಭಾರತವನ್ನು ನೋಡಿ ಆಮೇಲೆ ಬೇರೆ ದೇಶಕ್ಕೆ ಹೋಗಿ ಎಂದು ಅಪ್ಪ ಹೇಳುತ್ತಿದ್ದರು. ಇಡೀ ಇಂಡಿಯಾ ಟ್ರಿಪ್‌ ಮಾಡಿದ್ದೇವೆ, ನೇಪಾಳ ಕಡೆ ಬಿಟ್ಟು ಬಾಕಿ ಎಲ್ಲಾ ನೋಡಿದ್ದೇವೆ‌. ಬಾಲ್ಯದ ದಿನ ಸ್ವಿಮಿಂಗ್‌, ಓದೋದು ಹೀಗೆ ಕಲಿತಾ ಇದ್ವಿ. ಅಪ್ಪನನ್ನು ತುಂಬಾ ಮಿಸ್‌ ಮಾಡಿಕೊಂಡಿದ್ದೇವೆ ಎನ್ನುವುದು ಇಲ್ಲ, ಯಾಕೆಂದ್ರೆ ಏನೇ ಮುಖ್ಯವಾದ ದಿನ ಇದ್ರೂ ಅವರು ಬರುತ್ತಿದ್ದರು. ಎಂದು ತಮ್ಮ ತಂದೆಯ ಬಗ್ಗೆ ಹೆಮ್ಮೆಯ ಮಾತುಗಳನ್ನು ಆಡಿದರು. ಇನ್ನು ಅವರ ತಂದೆ ಮಾತನಾಡಿ, 
ಯಾವತ್ತು ನನ್ನ ಮಕ್ಕಳನ್ನು ಹೆಣ್ಣುಮಕ್ಕಳೆಂದು ಬೆಳೆಸಿಲ್ಲ. ಒಂದು ಜೀವನ ಅಂದಾಗ ಯಾವುದಕ್ಕೂ ಅವರಿಗೆ ಕಡಿವಾಣ ಹಾಕಿಲ್ಲ ಎಂದು ತಿಳಿಸಿದರು.