Dhruva Sarja: ಹೊಸ ಹೀರೋನನ್ನ ಪರಿಚಯಿಸಿ ಗೆದ್ದ ನಿರ್ದೇಶಕ ಎ.ಪಿ ಅರ್ಜುನ್!

ಧ್ರುವ ಸರ್ಜಾ ಇಂದು ಬಿಗ್ ಸ್ಟಾರ್. ಆದರೆ ಧ್ರುವ ನಡೆದು ಬಂದ ಹಾದಿಯನ್ನ ಒಮ್ಮೆ ತಿರುಗಿ ನೋಡಿದರೆ ಅಲ್ಲಿ ಸಿಗೋ ಮೊದಲ ಹೆಸರು ನಿರ್ದೇಶಕ ಎ.ಪಿ ಅರ್ಜುನ್. ಅದ್ಧೂರಿ ಸಿನಿಮಾಗೆ ಧ್ರುವ ಸರ್ಜಾರನ್ನ ಆಯ್ಕೆ ಮಾಡಿದ್ದ ಎ.ಪಿ ಅರ್ಜುನ್ ಅಂದು ಧ್ರುವನ ಟ್ಯಾಲೆಂಟ್ ನೋಡಿ ತ್ರಿಲ್ ಆಗಿದ್ರು.

First Published Apr 11, 2022, 4:37 PM IST | Last Updated Apr 11, 2022, 4:37 PM IST

ಧ್ರುವ ಸರ್ಜಾ (Dhruva Sarja) ಇಂದು ಬಿಗ್ ಸ್ಟಾರ್. ಆದರೆ ಧ್ರುವ ನಡೆದು ಬಂದ ಹಾದಿಯನ್ನ ಒಮ್ಮೆ ತಿರುಗಿ ನೋಡಿದರೆ ಅಲ್ಲಿ ಸಿಗೋ ಮೊದಲ ಹೆಸರು ನಿರ್ದೇಶಕ ಎ.ಪಿ ಅರ್ಜುನ್ (AP Arjun). ಅದ್ಧೂರಿ ಸಿನಿಮಾಗೆ ಧ್ರುವ ಸರ್ಜಾರನ್ನ ಆಯ್ಕೆ ಮಾಡಿದ್ದ ಎ.ಪಿ ಅರ್ಜುನ್ ಅಂದು ಧ್ರುವನ ಟ್ಯಾಲೆಂಟ್ ನೋಡಿ ತ್ರಿಲ್ ಆಗಿದ್ರು. ಧ್ರುವ ಸರ್ಜಾ ನಾನು ಸಿನಿಮಾ ಕುಟುಂಬದಿಂದ ಬಂದವನು ಅರ್ಜುನ್ ಸರ್ಜಾ ನನ್ನ ಚಿಕ್ಕಪ್ಪ. ಚಿರು ಸರ್ಜಾ ಅಣ್ಣ. ಶಕ್ತಿ ಪ್ರಸಾದ್ ಅವರ ಮೊಮ್ಮಗ ನಾನು ಅಂತ ಎಲ್ಲೂ ಹೇಳಿಕೊಳ್ಳದೇ ಆಡಿಷನ್ ಮೂಲಕ ಸೆಲೆಕ್ಟ್ ಆಗಿ ಹೀರೋ ಆದವರು. ತನ್ನ ಹೀರೋ ಮೇಲೆ ನಂಬಿಕೆ ಇಟ್ಟು ಅದ್ಧೂರಿ ಸ್ಟೋರಿ ಹೆಣೆದ ಎ.ಪಿ ಅರ್ಜುನ್ ಹೊಸ ಹೀರೋನನ್ನ ಚಿತ್ರರಂಗಕ್ಕೆ ಪರಿಚಯಿಸಿ ಗೆದ್ದರು. 2005ರಲ್ಲಿ ಅಸೋಸಿಯೆಟ್ ಡೈರೆಕ್ಟರ್ ಆಗಿ ಸಿನಿಮಾ ವೃತ್ತಿ ಶುರು ಮಾಡಿದ್ದ ಎಪಿ. ಅರ್ಜುನ್ ಹಾಡುಗಳನ್ನ ಬರೆದು ಫೇಮಸ್ ಆದರು. 

Dhruva Sarja: ಕಾಶ್ಮೀರದಲ್ಲಿ ಆಕ್ಷನ್ ಪ್ರಿನ್ಸ್ ನಟನೆಯ 'ಮಾರ್ಟಿನ್' ಶೂಟಿಂಗ್

ಕೊನೆಗೆ 2009ರಲ್ಲಿ ಲೂಸ್ ಮಾದ ಯೋಗಿಯ ಅಂಬಾರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳೋ ಮೂಲಕ ನಿರ್ದೇಶನ ಕ್ಯಾಪ್ ತೊಟ್ಟು ಗೆದ್ರು. ಅಂಬಾರಿಯ ಗೆಲುವು ಎ.ಪಿ ಅರ್ಜುನ್‌ಗೆ ಮತ್ತೊಂದು ಅದ್ಧೂರಿ ಸಿನಿಮಾ ಮಾಡೋಕೆ ಪ್ರೇರಣೆ ಆಯ್ತು. ಅವರ ಅದ್ಧೂರಿ ಕತೆಗೆ ಯಂಗ್ ಟ್ಯಾಲೆಂಟ್ಅನ್ನ ಹುಡುಕುತ್ತಿದ್ದ ಎ.ಪಿ ಅರ್ಜುನ್‌ಗೆ ಸಿಕ್ಕಿದ್ದು ಧ್ರುವ ಸರ್ಜಾ. ಕಟ್ಟುಮಸ್ತು ದೇಹ, ಪಟ ಪಟ ಅಂತ ಹೊಡೆಯೋ ಡೈಲಾಗ್, ಆಕ್ಷನ್‌ಗೂ ಸೈ, ಡಾನ್ಸ್‌ಗೂ ಜೈ ಎನ್ನುತ್ತಿದ್ದ ಧ್ರುವರನ್ನ ಎ.ಪಿ ಅರ್ಜುನ್ ಬಿಗಿದಪ್ಪಿಕೊಂಡು ಅದ್ಧೂರಿ ಸಿನಿಮಾ ಮಾಡಿದರು. ಅದ್ಧೂರಿ ಸಿನಿಮಾದ ಬಳಿಕ ಎ,ಪಿ ಅರ್ಜುನ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆದ್ರು. ಧ್ರುವ ಕೂಡ ಮೂರು ಸಿನಿಮಾಗಳನ್ನ ಮಾಡಿ, ತನ್ನ ಐದನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳೋ ಜವಬ್ಧಾರಿಯನ್ನ ಮತ್ತೆ ಎ.ಪಿ ಅರ್ಜುನ್ ಹೆಗಲೇರಿಸಿದ್ದಾರೆ. ಈಗ ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾರನ್ನ ಪ್ಯಾನ್ ಇಂಡಿಯಾ ಸ್ಟಾರ್ ಅಗಿದ್ದು, ಆಕ್ಷನ್ ಪ್ರಿನ್ಸ್ ಮಾರ್ಟಿನ್ ಲುಕ್ ಸಿನಿಮಾದ ಮೇಲೆ ಸೆನ್ಸೇಷನ್ ಸೃಷ್ಟಿಸಿದೆ. ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಗ್ಯಾಂಗ್ ಸ್ಟಾರ್ ಆಗಿದ್ದು, ಈ ಸಿನಿಮಾದ 70ರಷ್ಟು ಶೂಟಿಂಗ್ ಕಂಪ್ಲೀಟ್ ಆಗಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies