Asianet Suvarna News Asianet Suvarna News

Vedha Movie: ಶಿವರಾಜ್‌ಕುಮಾರ್‌ರನ್ನ ಬಾವನಾಗಿ ಪಡೆಯಲು ಪುಣ್ಯ ಮಾಡಿದ್ದೆ: ಮಧು ಬಂಗಾರಪ್ಪ

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ 125ನೇ ವೇದ ಸಿನಿಮಾವನ್ನು ಪತ್ನಿ ಗೀತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಗೀತಾ ಪಿಕ್ಚರ್ ಬ್ಯಾನರ್ ಲಾಂಚ್ ಕಾರ್ಯಕ್ರಮದಲ್ಲಿ ಮಧು ಬಂಗಾರಪ್ಪ ಶಿವಣ್ಣನ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ 125ನೇ ವೇದ ಸಿನಿಮಾವನ್ನು ಪತ್ನಿ ಗೀತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಗೀತಾ ಪಿಕ್ಚರ್ ಬ್ಯಾನರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಶಿವರಾಜ್‌ಕುಮಾರ್‌ರನ್ನ ಬಾವನಾಗಿ ಪಡೆಯಲು ಪುಣ್ಯ ಮಾಡಿದ್ದೆ. ನಾವು ತೊಂದರೆಯಲ್ಲಿದ್ದಾಗ ಜನುಮದ ಜೋಡಿ‌ ಸಿನಿಮಾ ಹಿಟ್ ಕೊಟ್ಟಿತ್ತು. ಇವರ ಗೀತಾ ಪಿಕ್ಚರ್ಸ್ ದೊಡ್ಡ ಸಕ್ಸಸ್ ಆಗಲಿ. ನಿರ್ದೇಶಕ ಹರ್ಷ ಅವರಿಗೂ ಒಳ್ಳೆಯದಾಗಲಿ ಎಂದು ಮಧು ಬಂಗಾರಪ್ಪ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಎ. ಹರ್ಷ ನಿರ್ದೇಶನದಲ್ಲಿ ವೇದ ಸಿನಿಮಾ ತಯಾರಾಗುತ್ತಿದ್ದು, ಭಜರಂಗಿ, ವಜ್ರಕಾಯ, ಭಜರಂಗಿ- 2 ಹಿಟ್ ಚಿತ್ರಗಳ ನಿರ್ದೇಶಕ ಹರ್ಷ ವೇದ ಸಿನಿಮಾದ ಮೂಲಕ ಭರವಸೆ ಮೂಡಿಸಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies