Asianet Suvarna News Asianet Suvarna News

Rachita Ram: ಮುದ್ದು ನೀನು ಸಾಂಗ್‌ನಲ್ಲಿ ಮುದ್ದಾಗಿ ಕಾಣಿಸಿದ ನಟಿ

ಕೃಷ್ಣ ಅಜಯ್ ರಾವ್ ಹಾಗು ಡಿಂಪಲ್ ಕ್ವೀನ್ ರಚಿತಾ ರಾಮ್‌(Rachita Ram) ಮೊದಲ ಬಾರಿಗೆ ಸ್ಕ್ರೀನ್ ಹಂಚಿಕೊಂಡಿರುವ 'ಲವ್ ಯೂ ರಚ್ಚು' ಸಿನಿಮಾ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇದೀಗ ಸಿನಿಮಾ ಬಿಡುಗಡೆ ಸಜ್ಜಾಗಿದೆ.ಸದ್ಯ ಮುದ್ದು ನೀನೆ ಹಾಡು ರಿಲೀಸ್(Song Release) ಆಗಿದೆ.

First Published Nov 10, 2021, 5:08 PM IST | Last Updated Nov 10, 2021, 5:10 PM IST

ಡಿಂಪಲ್ ಕ್ವೀನ್(Dimple Queen) ಸದ್ಯ ಹಾಟ್ ಗ್ಲಾಮರ್ ಗೊಂಬೆ ಆಗಿ ಬದಲಾಗಿದ್ದಾರೆ. ಹೌದು, ಅದಕ್ಕೆ ಸಾಕ್ಷಿ ಲವ್ ಯು ರಚ್ಚು ಸಿನಿಮಾದ ಈ ಹಾಡು. ಕೃಷ್ಣ ಅಜಯ್ ರಾವ್ ಹಾಗು ಡಿಂಪಲ್ ಕ್ವೀನ್ ರಚಿತಾ ರಾಮ್‌ ಮೊದಲ ಬಾರಿಗೆ ಸ್ಕ್ರೀನ್ ಹಂಚಿಕೊಂಡಿರುವ 'ಲವ್ ಯೂ ರಚ್ಚು' ಸಿನಿಮಾ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇದೀಗ ಸಿನಿಮಾ ಬಿಡುಗಡೆ ಸಜ್ಜಾಗಿದೆ.ಸದ್ಯ ಮುದ್ದು ನೀನೆ ಹಾಡು ರಿಲೀಸ್ ಆಗಿದೆ.

ಅಜಯ್ ರಾವ್‌ ಜೊತೆ Bedroomನಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಂಡ ರಚಿತಾ ರಾಮ್

ರಚಿತಾ ರಾಮ್ ಅವರು ಈ ಹಿಂದೆ ಉಪೇಂದ್ರ ಅವರ 'ಐ ಲವ್ ಯೂ' ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಆ ಚಿತ್ರದ 'ಮಾತನಾಡಿ.. ಮಾಯಾವಾದೆ..' ಹಾಡು ಸಖತ್ ಹಿಟ್ ಆಗಿತ್ತು ಕೂಡ. ಇದೀಗ ರಚಿತಾ ಮತ್ತೊಮ್ಮೆ ಬೋಲ್ಡ್ ಲುಕ್‌ನಲ್ಲಿ ಮಿಂಚಿದ್ದಾರೆ. ಅಜಯ್ ರಾವ್ ಹೀರೋ ಆಗಿರುವ 'ಲವ್ ಯೂ ರಚ್ಚು' ಸಿನಿಮಾದ 'ಮುದ್ದು ನೀನು..' ಅನ್ನೋ ವಿಡಿಯೋ ಸಾಂಗ್ ಮಂಗಳವಾರ ರಿಲೀಸ್ ಆಗಿದೆ. ಈ ಹಾಡಿನಲ್ಲಿ ಅಜಯ್ ರಾವ್ ಜೊತೆಗೆ ರಚಿತಾ ಕೊಂಚ ಗ್ಲಾಮರಸ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಹಾಡನ್ನು ನೋಡಿದವರು ಮೆಚ್ಚಿಕೊಂಡಿದ್ದಾರೆ. ಜನಪ್ರಿಯ ಗಾಯಕ ಸಿದ್ ಶ್ರೀರಾಮ್ ಈ ಹಾಡನ್ನು ಹಾಡಿದ್ದು, ಕದ್ರಿ ಮಣಿಕಾಂತ್ ಸಂಗೀತ ನೀಡಿದ್ದಾರೆ. ಹಾಡನ್ನು ತುಂಬ ಬ್ಯೂಟಿಫುಲ್ ಆಗಿ ಚಿತ್ರೀಕರಣ ಮಾಡಲಾಗಿದ್ದು, ನೋಡುಗರಿಗೆ ಇಷ್ಟವಾಗುವಂತಿದೆ.