Asianet Suvarna News Asianet Suvarna News

RIP: ಅಯ್ಯಪ್ಪ ಭಕ್ತರ ಸಂಪ್ರದಾಯದ ಪ್ರಕಾರ ಹಿರಿಯ ನಟ ಶಿವರಾಂ ಅಂತ್ಯಸಂಸ್ಕಾರ

Dec 5, 2021, 3:23 PM IST
  • facebook-logo
  • twitter-logo
  • whatsapp-logo

ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇಂದು ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೇರವೇರಿದೆ. ಅಯ್ಯಪ್ಪ ಭಕ್ತಾದಿಗಳಿಂದ ಪಾರ್ಥೀವ ಶರೀರಕ್ಕೆ ಅಷ್ಟಾಭಿಷೇಕ ಮಾಡಲಾಗಿತ್ತು. ತುಪ್ಪ, ಪುಷ್ಪಾ, ಗಂಧ, ವಿಭೂತಿ, ಖರ್ಜೂರ, ಕೆಂಪು ಕಲ್ಲುಸಕ್ಕರೆ, ಹಾಲು, ಮೊಸಲು, ಅವಲಕ್ಕಿ ಒಳಗೊಂಡ ವಸ್ತುಗಳಿಂದ ನಡೆಯುವ ಅಷ್ಟಾಭಿಷೇಕ ಇದಾಗಿತ್ತು. ಸಚಿತ ಆರ್‌.ಅಶೋಕ್ ಅವರ ನೇತೃತ್ವದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಗಿತ್ತು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment