Asianet Suvarna News Asianet Suvarna News

V/R ಟೆನ್ಷನ್ ಮಧ್ಯೆಯೂ ಕ್ರಿಕೆಟ್ ಮೈದಾನಕ್ಕಿಳಿದ ಕಿಚ್ಚ ಸುದೀಪ್.!

ತಮ್ಮ ಸಿನಿಮಾ ರಿಲೀಸ್ ಆಗುತ್ತಿದೆ ಎನ್ನುವಾಗ, ಒತ್ತಡ, ಟೆನ್ಷನ್ ಇದ್ದೇ ಇರುತ್ತೆ.  ವಿಕ್ರಾಂತ್ ರೋಣ ಟೆನ್ಷನ್ ನಡುವೆ, ಕಿಚ್ಚ ಸುದೀಪ್ ಮೈದಾನಕ್ಕಿಳಿದು ಕ್ರಿಕೆಟ್ ಆಡಿದ್ದಾರೆ. ಬ್ಯಾಟ್ ಬೀಸಿ ರಿಲ್ಯಾಕ್ಸ್ ವೇಳೆ ತಮ್ಮ ಸಿನಿಮಾ ವಿಕ್ರಾಂತ್ ರೋಣದ ಬಗ್ಗೆಯೂ ಮಾತನಾಡಿದ್ದಾರೆ. 

ಕಿಚ್ಚ ಸುದೀಪ್‌ ಅಭಿನಯದ ‘ವಿಕ್ರಾಂತ್‌ ರೋಣ’ (Vikrant Rona) ಚಿತ್ರದ ಟ್ರೇಲರ್‌ ಜೂನ್‌ 23ಕ್ಕೆ ಬಿಡುಗಡೆ ಆಗುತ್ತಿದೆ. ಏಕಕಾಲಕ್ಕೆ ಏಳು ಭಾಷೆಗಳಲ್ಲಿ ಟ್ರೇಲರ್‌ ಅನಾವರಣ ಆಗಲಿದೆ. ಸುದೀಪ್‌ (Sudeep)  ಅವರೇ ಟ್ರೇಲರ್‌ ಬಿಡುಗಡೆ ದಿನಾಂಕವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುವ ಮೂಲಕ ಅವರ ಅಭಿಮಾನಿಗಳಲ್ಲಿ ಕ್ರೇಜ್‌ ಹುಟ್ಟಿಸಿದ್ದಾರೆ. ಜಾಕ್‌ ಮಂಜು ನಿರ್ಮಾಣದ, ಅನೂಪ್‌ ಭಂಡಾರಿ ನಿರ್ದೇಶನದ ಈ ಚಿತ್ರವನ್ನು ಜುಲೈ 28ರಂದು ಬಿಡುಗಡೆ ಮಾಡಲಾಗುತ್ತಿದೆ.

ಗಿಚ್ಚಿ ಗಿಲಿಗಿಲಿಯಲ್ಲಿ ಡಬಲ್ ಮೀನಿಂಗ್ ಕಾಮಿಡಿ ಹೆಚ್ಚಾಗಿದ್ಯಾ? ಸಾಧು ಕೋಕಿಲಾ ಉತ್ತರ

ತಮ್ಮ ಸಿನಿಮಾ ರಿಲೀಸ್ ಆಗುತ್ತಿದೆ ಎನ್ನುವಾಗ, ಒತ್ತಡ, ಟೆನ್ಷನ್ ಇದ್ದೇ ಇರುತ್ತೆ.  ವಿಕ್ರಾಂತ್ ರೋಣ ಟೆನ್ಷನ್ ನಡುವೆ, ಕಿಚ್ಚ ಸುದೀಪ್ ಮೈದಾನಕ್ಕಿಳಿದು ಕ್ರಿಕೆಟ್ ಆಡಿದ್ದಾರೆ. ಬ್ಯಾಟ್ ಬೀಸಿ ರಿಲ್ಯಾಕ್ಸ್ ವೇಳೆ ತಮ್ಮ ಸಿನಿಮಾ ವಿಕ್ರಾಂತ್ ರೋಣದ ಬಗ್ಗೆಯೂ ಮಾತನಾಡಿದ್ದಾರೆ. ಇದೊಂದು ಹೃಯದಕ್ಕೆ ಹತ್ತಿರವಾದ ಸಿನಿಮಾ, ಜನರಿಗೆ ಇಷ್ಟವಾಗುತ್ತೆ ಅನ್ನೋ ಭರವಸೆ ಇದೆ. ಅವರ ಫೀಡ್‌ಬ್ಯಾಕ್‌ನ್ನು ನಾವು ಒಪ್ಪಿಕೊಳ್ಳುತ್ತೇವೆ' ಎಂದು ಸುದೀಪ್ ಹೇಳಿದರು. 

 

Video Top Stories