Asianet Suvarna News Asianet Suvarna News

ಸೀರೆಯಲ್ಲಿ ಯೋಗ, ನಟಿ ರುಕ್ಮಿಣಿಯ ವೀಡಿಯೋ ವೈರಲ್

ನಟಿಯರು ಜಿಮ್ ಜೊತೆ ಯೋಗ ಮಾಡಿ ಫಿಟ್‌ನೆಸ್ ಕಾಪಾಡಿಕೊಳ್ಳುವುದು ಎಲ್ಲರಿಗೂ ಗೊತ್ತು. ಅದರಲ್ಲಿಯೂ ಕೆಲವು ನಟಿಯರ ಯೋಗಾಸನ ಭಂಗಿಗಳು ಫೇಮಸ್. ಆದರೆ, ಭಜರಂಗಿಯ ಈ ನಟಿ ಮಾಡಿರುವ ಯೋಗ ಭಂಗಿಗಳಿಗೆ ತನ್ನದೇ ವಿಶೇಷವಿದೆ. ಸೀರೆಯುಟ್ಟು ಮಾಡಿದ ಯೋಗಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ಭಜರಂಗಿಯ ನಂದ ನಂದ ನೀ.. ಹಾಡಿನ ಮೂಲಕ ಕನ್ನಡಿಗರ ಮನ ಗೆದ್ದ ನಟಿ ರುಕ್ಮಿಣಿಯ ವೀಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದೂ ಯೋಗಾಸನ ಮಾಡುತ್ತಿರುವುದು. ಸುಖಾ ಸುಮ್ಮನೆ ಜಿಮ್ ಔಟ್‌ಫಿಟ್ ಹಾಕ್ಕೊಂಡು ಯೋಗ ಮಾಡಿದ್ದರೆ ಬಹುಶಃ ಸುದ್ದಿಯಾಗುತ್ತಿರಲಿಲ್ಲ. ಬದಲಾಗಿ ಸೀರೆಯುಟ್ಟು ಕೆಲವು ಯೋಗಾಸನ ಭಂಗಿಗಳನ್ನು ಪ್ರದರ್ಶಿಸಿದ್ದು, ವಿಶೇಷವಾಗಿದೆ. ಭಾರತೀಯ ಮೂಲದ ಯೋಗದೊಂದಿಗೆ, ಭಾರತೀಯ ಉಡುಗೆ ಸೀರೆಯನ್ನು ತೊಟ್ಟಿದ್ದು ಜನರಿಗೆ ತುಂಬಾ ಇಷ್ಟವಾಗಿದೆ. ಹೇಗಿದೆ ಸೀರೆಯಲ್ಲಿ ಯೋಗದ ಭಂಗಿ? 

ಸಿನಿಮಾ ಹಂಗಾಮಾ ವೀಡಿಯೋಗಳಿಗೆ ಇಲ್ಲಿ ಕ್ಲಿಕ್ಕಿಸಿ