Asianet Suvarna News Asianet Suvarna News

Rider: ಕ್ರಿಸ್​ಮಸ್‌ಗೆ ತೆರೆಮೇಲೆ ಬರಲು ಸಜ್ಜಾದ ನಿಖಿಲ್ ಕುಮಾರ್

ನಿಖಿಲ್ ಕುಮಾರ್ ಅಭಿನಯದ ರೈಡರ್ ಚಿತ್ರವು ಕ್ರಿಸ್​ಮಸ್‌ನಂದು ಡಿಸೆಂಬರ್​ 24ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ತೆಲುಗು ನಿರ್ದೇಶಕ ವಿಜಯ್‌ ಕುಮಾರ್‌ ಕೊಂಡ (Vijay Kumar Konda) ರೈಡರ್‌ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ನ (Sandalwood) ಯುವರಾಜ ನಿಖಿಲ್ ಕುಮಾರ್ (Nikhil Kumar) ಅವರ ಬಹು ನಿರೀಕ್ಷಿತ 'ರೈಡರ್' (Rider) ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ (Teaser) ಹಾಗೂ ಹಾಡುಗಳು (Songs) ಸಿನಿರಸಿಕರ ಗಮನ ಸೆಳೆದಿದೆ. ಇದೀಗ 'ರೈಡರ್' ಚಿತ್ರವು ಕ್ರಿಸ್​ಮಸ್ (Christmas)​ ನಿಮಿತ್ತ ಡಿಸೆಂಬರ್​ 24ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ತೆಲುಗು ನಿರ್ದೇಶಕ ವಿಜಯ್‌ ಕುಮಾರ್‌ ಕೊಂಡ (Vijay Kumar Konda) ರೈಡರ್‌ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 

Rider Song Release: ಪ್ರೇಯಸಿ ಜೊತೆ ಮೆಲ್ಲನೆ ಬೆರಳು ಹಿಡಿದು ಬಂದ ನಿಖಿಲ್ ಕುಮಾರ್

ನಿಖಿಲ್ ಈ ಚಿತ್ರದಲ್ಲಿ ಬಾಸ್ಕೆಟ್ ಬಾಲ್ ಪ್ಲೇಯರ್ (Basketball Player) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ನಿಖಿಲ್‌ಗೆ ಯುವ ನಟಿ ಕಾಶ್ಮೀರಿ ಪರ್ದೇಸಿ (Kashmira Pardeshi) ಜೋಡಿಯಾಗಿದ್ದಾರೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಶಿವರಾಜ್‌ ಕೆ.ಆರ್‌ ಪೇಟೆ, ಚಿಕ್ಕಣ್ಣ, ಅಚ್ಯುತ್‌ ಕುಮಾರ್, ರಾಜೇಶ್ ನಟರಂಗ, ರಾಮಚಂದ್ರ ರಾಜು, ದತ್ತಣ್ಣ ಅಭಿನಯಿಸಿದ್ದಾರೆ. ಕೆ.ಎಮ್.ಪ್ರಕಾಶ್ ಸಂಕಲನ, ಶ್ರೀಶ ಕುದುವಳ್ಳಿ ಕ್ಯಾಮೆರಾ ಕೈ ಚಳಕ, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories