Asianet Suvarna News Asianet Suvarna News

Rider Song Release: ಪ್ರೇಯಸಿ ಜೊತೆ ಮೆಲ್ಲನೆ ಬೆರಳು ಹಿಡಿದು ಬಂದ ನಿಖಿಲ್ ಕುಮಾರ್

ರೈಡರ್ ಚಿತ್ರದ ರೊಮ್ಯಾಂಟಿಕ್ ಹಾಡು 'ಮೆಲ್ಲನೆ ಬೆರಳ ಬೆಸೆದು' ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದ್ದು, ಸ್ಟೈಲಿಶ್​ ಲುಕ್​ನಲ್ಲಿ ನಿಖಿಲ್ ಕುಮಾರ್ ನಟಿ ಕಾಶ್ಮೀರಿ ಪರ್ದೇಸಿ ಜೊತೆ ಸ್ಲೋ ಮೂಮೆಂಟ್ ಸ್ಟೆಪ್ಸ್‌ ಹಾಕಿದ್ದಾರೆ.

ಸ್ಯಾಂಡಲ್‌ವುಡ್‌ನ (Sandalwood) ಯುವರಾಜ ನಿಖಿಲ್ ಕುಮಾರ್ (Nikhil Kumar) ಅವರ ಬಹು ನಿರೀಕ್ಷಿತ 'ರೈಡರ್' (Rider) ಚಿತ್ರದ ಮತ್ತೊಂದು ಹಾಡು ಲಹರಿ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. 'ಮೆಲ್ಲನೆ ಬೆರಳ ಬೆಸೆದು' ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದ್ದು, ಸಿನಿರಸಿಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಾಡಿನಲ್ಲಿ ಸ್ಟೈಲಿಶ್​ ಲುಕ್​ನಲ್ಲಿ ನಿಖಿಲ್ ನಟಿ ಕಾಶ್ಮೀರಿ ಪರ್ದೇಸಿ ಜೊತೆ ಸ್ಲೋ ಮೂಮೆಂಟ್ ಸ್ಟೆಪ್ಸ್‌ ಹಾಕಿದ್ದಾರೆ. ಕಲರ್‌ಫುಲ್‌ ಆಗಿ ಮೂಡಿಬಂದಿರುವ ಈ ಹಾಡಿಗೆ ಕವಿರಾಜ್ (Kaviraj) ಸಾಹಿತ್ಯವಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ (Arjun Janya) ಸಂಯೋಜಿಸಿರುವ ಈ ಹಾಡನ್ನು ಸಂಜಿತ್ ಹೆಗ್ಡೆ (Sanjith Hegde) ಹಾಡಿದ್ದಾರೆ.

ರೊಮ್ಯಾಂಟಿಕ್ ಹಾಡಿಗೆ ಸ್ಟೈಲಿಶ್ ಸ್ಟೆಪ್ಸ್‌ ಹಾಕಿದ ರೈಡರ್, ಟ್ರೆಂಡ್ ಆಯ್ತು ನಿಖಿಲ್ ಸಾಂಗ್

ತೆಲುಗು ನಿರ್ದೇಶಕ ವಿಜಯ್‌ ಕುಮಾರ್‌ ಕೊಂಡ (Vijay Kumar Konda) ರೈಡರ್‌ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಶಿವರಾಜ್‌ ಕೆ.ಆರ್‌ ಪೇಟೆ, ಚಿಕ್ಕಣ್ಣ, ಅಚ್ಯುತ್‌ ಕುಮಾರ್, ರಾಜೇಶ್ ನಟರಂಗ, ರಾಮಚಂದ್ರ ರಾಜು, ದತ್ತಣ್ಣ ಅಭಿನಯಿಸಿದ್ದಾರೆ. ಸಿನಿಮಾ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಚಿತ್ರ ತಂಡ ನಿರತವಾಗಿದೆ. ಇನ್ನು ಕೆಲವೇ ದಿನದಲ್ಲಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಪ್ರಕಟ ಮಾಡಲಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories