Asianet Suvarna News Asianet Suvarna News

ಜೂನಿಯರ್ ರಿಷಬ್ ಶೆಟ್ಟಿ; ಸ್ಟೈಲ್, ಹೈಟ್, ವಾಕ್ ಸೇಮ್ ಟು ಸೇಮ್

ರಿಷಬ್ ಶೆಟ್ಟರನ್ನೇ ಹೋಲುವ ಯುವಕನೊಬ್ಬ ಅವರದೇ ತವರಿನಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಜೂನಿಯರ್ ರಿಷಬ್  ಶೆಟ್ಟಿ ವಿಡಿಯೋ ವೈರಲ್ ಆಗಿದೆ. 

ರಿಷಬ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯದ ಕಾಂತರಾ ಚಲನಚಿತ್ರ 50 ದಿನ ಪೂರೈಸಿದೆ. ಇಡೀ ದೇಶ ಈ ಸಿನಿಮಾ ಬಗ್ಗೆ ಹೆಮ್ಮೆಪಡುತ್ತಿದ್ದರೆ , ಉಡುಪಿ ಜಿಲ್ಲೆಯ ಜನ ನಮ್ಮೂರ ಹುಡುಗನ ಸಾಧನೆಗೆ ಹೆಮ್ಮೆಯಿಂದ ಬೀಗುತ್ತಿದ್ದಾರೆ. ಈ ನಡುವೆ ರಿಷಬ್ ಶೆಟ್ಟರನ್ನೇ ಹೋಲುವ ಯುವಕನೊಬ್ಬ ಅವರದೇ ತವರಿನಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಉಡುಪಿ ಯಲ್ಲೊಬ್ಬ ಜೂನಿಯರ್ ರಿಷಬ್  ಶೆಟ್ಟಿ ವಿಡಿಯೋ ವೈರಲ್ ಆಗಿದೆ. ಸ್ಟೈಲು ಹೈಟು ಹೇರ್ ಸೇಮ್ ಟು ಸೇಮ್ ರಿಷಬ್. ಆರ್ ಎಕ್ಸ್ ಹಂಡ್ರೆಡ್ ಬೈಕ್ ಹತ್ತಿ ಪಂಚೆ ಕಟ್ಟಿ ಬಂದರೆ ಅವರ್ಯಾರು ಇವರ್ಯಾರು ಗೊತ್ತಾಗಲ್ಲ. ಜಿಲ್ಲೆಯ ಶಿರ್ವ ಗ್ರಾಮದಲ್ಲಿ ಮೊಬೈಲ್ ಶಾಪ್ ನಲ್ಲಿ ಕೆಲಸ ಮಾಡುವ ಪ್ರದೀಪ್ ಆಚಾರ್ಯ ನೋಡೊಕೆ ಥೇಟ್ ರಿಷಬ್ ಹಾಗೆ ಇದ್ದಾರೆ.  ಮೊಬೈಲ್ ಶಾಪ್‌ಗೆ ಬಂದವರು ರಿಷಬ್ ತರ ಕಾಣ್ತೀರಿ ಅಂತ ಹೇಳಿದ್ರಂತೆ. ಬಳಿಕವೇ ಅವರಿಗೆ ಕನ್ನಡಿ ಮುಂದೆ ನಿಂತಾಗ ಪ್ರದೀಪ್ ಗೂ ತಾನು ರಿಷಬ್ ಥರ ಕಾಣ್ತಿನಿ ಅಂತ ಗೊತ್ತಾಗಿದೆ. ಒಂದು ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾಗೆ ಬಿಟ್ಟಿದ್ದೇ ತಡ ಜೂನಿಯರ್ ರಿಷಬ್ ಗೆ ಡಿಮಾಂಡೋ ಡಿಮಾಂಡ್. ಥೇಟ್ ಕಾಂತರಾ ಶಿವನನ್ನೆ ಹೊಲುವ ಪ್ರದೀಪ್ ಆಚಾರ್ಯ. ಒಮ್ಮೆಯಾದರೂ ರಿಷಬ್ ಶೆಟ್ಟಿ ನಾ ಭೇಟಿಯಾಗಬೇಕು ಅನ್ನೋ ಕನಸು ಇದೆಯಂತೆ. 

Video Top Stories