Asianet Suvarna News Asianet Suvarna News

Vedha Trailer: 'ವೇದ' ಹೆದರೋದು ಇಲ್ಲ, ಕ್ಷಮಿಸೋದು ಇಲ್ಲ: ಟ್ರೈಲರ್ ಬೆಂಕಿ-ಬಿರುಗಾಳಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ವೇದ' ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ವೇದ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ದುಷ್ಟರನ್ನು ಕೊಲ್ಲುವ ದೃಶ್ಯಗಳು ಮೈ ಜುಮ್ ಅನ್ನಿಸುತ್ತದೆ. ಟ್ರೈಲರ್ ನೋಡಿ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ನೋಡೋದು ಫಿಕ್ಸ್ ಎನ್ನುತ್ತಿದ್ದಾರೆ. ನಿರ್ದೇಶಕ ಹರ್ಷ ಪಾತ್ರಗಳನ್ನು ಡಿಸೈನ್ ಮಾಡಿರುವ ರೀತಿ, ಪ್ರತಿಯೊಬ್ಬರ ಲುಕ್ಕು, ಪರ್ಫಾರ್ಮೆನ್ಸ್ ಸೂಪರ್ ಎನ್ನುವಂತಿದೆ. ಒಂದು ಊರು. ಆ ಊರಿನ ಆಚರಣೆಗಳು, ಜನರ ನಂಬಿಕೆಗಳು. ಇದ್ದಕ್ಕಿದಂತೆ ಅಲ್ಲಿ ದುಷ್ಟರ ಕಾಟ. ಅವರನ್ನು ಎದುರಿಸಿ ನಿಲ್ಲುವ ನಾಯಕ ಮತ್ತು ಆತನ ಸಂಗಡಿಗರು. ಖಳರ ವಿರುದ್ಧ 'ವೇದ'ನ ದಂಡಯಾತ್ರೆ. ಅಬ್ಬಬ್ಬಾ ಟ್ರೈಲರ್ ನಿಜಕ್ಕೂ ಅದ್ಭುತ ಅನುಭವ ನೀಡುವಂತಿದೆ. ಯಾವತ್ತೂ ಶಿವಣ್ಣ ಹೀಗೆ ಇಂಥಾ ಲುಕ್ ನಲ್ಲಿ ಕಾಣಿಸಿರಲಿಲ್ಲ. ಶಿವಣ್ಣ ಎರಡು ಶೇಡ್‌ಗಳಿರುವ ಪಾತ್ರದಲ್ಲಿ ಮಿಂಚಿದ್ದಾರೆ. ಒಂದರಲ್ಲಿ ಕೊಂಚ ಯಂಗ್ ಆಗಿ ಮತ್ತೊಂದರಲ್ಲಿ ಬಿಳಿ ಗಡ್ಡ, ಮೀಸೆಯಲ್ಲಿ ವಯಸ್ಸಾದ ವ್ಯಕ್ತಿಯಾಗಿ ದರ್ಶನ ಕೊಟ್ಟಿದ್ದಾರೆ. ಇನ್ನು ಶಿವಣ್ಣನನ್ನು ಮೀರಿಸುವಂತೆ ಅದಿತಿ ಅರುಣ್ ಸಾಗರ್, ಶ್ವೇತಾ ಚೆಂಗಪ್ಪ ಅಬ್ಬರಿಸಿದ್ದಾರೆ.

Pathan Song;'ಬೇಷರಂ ರಂಗ್' ವಿವಾದದ ಬಳಿಕ ಮೊದಲ ಬಾರಿಗೆ ಮೌನ ಮುರಿದ ನ ...