Asianet Suvarna News Asianet Suvarna News

ಸದ್ದಿಲ್ಲದೆ ಶೂಟಿಂಗ್ ಮುಗಿಸಿದ ಭೀಮ: ಹೇಗಿದೆ ಗೊತ್ತಾ ದುನಿಯಾ ವಿಜಿ ಸ್ಟೈಲ್ ಆಫ್ ಡೈರೆಕ್ಷನ್!

ದುನಿಯಾ ವಿಜಯ್ ನಟಿಸಿ ನಿರ್ದೇಶನ ಮಾಡ್ತಿರೋ ಭೀಮ ಸಿನಿಮಾದ ಶೂಟಿಂಗ್ ಸದ್ದಿಲ್ಲದೆ ನಡೆಯುತ್ತಿದೆ. ಈಗಾಗಲೇ ಸಿನಿಮಾತಂಡ ಫಸ್ಟ್ ಶೆಡ್ಯೂಲ್ ಚಿತ್ರೀಕರಣ ಮುಗಿಸಿ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿದೆ.

ದುನಿಯಾ ವಿಜಯ್ ನಟಿಸಿ ನಿರ್ದೇಶನ ಮಾಡ್ತಿರೋ ಭೀಮ ಸಿನಿಮಾದ ಶೂಟಿಂಗ್ ಸದ್ದಿಲ್ಲದೆ ನಡೆಯುತ್ತಿದೆ. ಈಗಾಗಲೇ ಸಿನಿಮಾತಂಡ ಫಸ್ಟ್ ಶೆಡ್ಯೂಲ್ ಚಿತ್ರೀಕರಣ ಮುಗಿಸಿ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿದೆ. ಭೀಮ ಸಿನಿಮಾದ ಮೇಕಿಂಗ್ ರಿಲೀಸ್ ಆಗಿದ್ದು ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ ಚಿತ್ರೀಕರಣ ಮಾಡಿದ್ದಾರೆ. ಮಸೀದಿಯಲ್ಲಿ ಶೂಟಿಂಗ್ ಮಾಡಿರೋ ದುನಿಯಾ ವಿಜಯ್ ಭೀಮ ಚಿತ್ರದಲ್ಲಿ ಹಿಂದೂ ಮುಸ್ಲಿಂ ಬಾಂಧವ್ಯದ ಬಗ್ಗೆ ಹೇಳಲಿದ್ದಾರಾ ಅನ್ನೋ ಅನುಮಾನಗಳು ಮೇಕಿಂಗ್ ನೋಡ್ತಿದ್ರೆ ಬರ್ತಿದೆ. ಇನ್ನು ಜಯಮ್ಮನ ಮಗ ಸಿನಿಮಾದಲ್ಲಿ ವಿಜಿ ಜೊತೆ ಅಭಿನಯ ಮಾಡಿದ್ದ ನಟಿ ಕಲ್ಯಾಣಿ , ಭೀಮಾ ಚಿತ್ರದಲ್ಲಿಯೂ ದುನಿಯಾ ವಿಜಯ್ ಜೊತೆಯಾಗಿದ್ದು, ಈ ಚಿತ್ರದಲ್ಲಿಯೂ ವಿಜಿ ಅವ್ರಿಗೆ ಅದೃಷ್ಟ ತಂದು ಕೊಡ್ತಾರಾ ಕಾದು ನೋಡಬೇಕಿದೆ. 

ಫೈಟರ್ ಆಗಿದ್ದ ಹುಡುಗ ಸ್ಟಾರ್ ಆಗಿದ್ದು ಹೇಗೆ; ದುನಿಯಾ ವಿಜಯ್ ಇಂಟ್ರಸ್ಟಿಂಗ್ ಸಿನಿ ಜರ್ನಿ

ಸದ್ಯ ವಿಜಯ್ ಅವ್ರ ಭಾಗದ ಚಿತ್ರೀಕರಣವನ್ನ ಬಿಟ್ಟು ಮಿಕ್ಕವರ ಸೀನ್ ಗಳನ್ನ ಶೂಟ್ ಮಾಡಲಾಗ್ತಿದೆ. ಪ್ರತಿ ಆರ್ಟಿಸ್ಟ್‌ಗಳಿಗೂ ತಾವೇ ಆಕ್ಟ್ ಮಾಡಿ ತೋರಿಸಿಕೊಡುವ ಮೂಲಕ ಪ್ರತಿ ಸೀನ್‌ಗಳನ್ನ ಡಿಟೇಲ್ ಆಗಿ ಚಿತ್ರೀಕರಣ ಮಾಡುತ್ತಿದ್ದಾರೆ. ಟಾಕಿ ಪೋಷರ್ನ್ ಜೊತೆ ಕೆಲ ಮಾಸ್ ಹಾಗೂ ಸ್ಟಂಟ್ ಸೀನ್ ಗಳನ್ನ ನ್ಯಾಚುರಲ್ ಆಗಿ ಸೆರೆ ಹಿಡಿಯುತ್ತಿದ್ದಾರೆ ದುನಿಯಾ ವಿಜಯ್. ಭೀಮ ಮೊದಲ ಹಂತದ ಶೂಟಿಂಗ್ ಕಂಪ್ಲೀಟ್ ಮಾಡಿದ್ದು, ಎರಡನೇ ಹಂತದ ಚಿತ್ರೀಕರಣವನ್ನ ಇದೇ ವಾರದಿಂದ ಆರಂಭ ಮಾಡ್ತಿದ್ದಾರೆ ವಿಜಯ್. ದುನಿಯಾ ವಿಜಯ್ ಸೇರಿದಂತೆ ಅಚ್ಯುತ್ ಕುಮಾರ್ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರಕ್ಕೆ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ಬಂಡವಾಳ ಹಾಕಿದ್ದು, ಶಿವಸೇನಾ ಕ್ಯಾಮೆರಾ ವರ್ಕ್, ಮಾಸ್ತಿ ಡೈಲಾಗ್ಸ್ , ಚರಣ್ ರಾಜ್ ಮ್ಯೂಸಿಕ್ ಸಿನಿಮಾಗಿದೆ. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies