Asianet Suvarna News Asianet Suvarna News

ದೊಡ್ಮನೆ ಫ್ಯಾನ್ಸ್ ಅಲರ್ಟ್​..: 'ಯುವ' ಉತ್ಸವಕ್ಕೆ ಕೌಂಟ್ ಡೌನ್ ಸ್ಟಾರ್ಟ್​.!

ದೊಡ್ಮನೆ ಅಭಿಮಾನಿ ವೃಂಧ ಕನಸು ಮನಸಲ್ಲೂ ಜಪ ಮಾಡುತ್ತಿರೋ ಸಿನಿಮಾ ಯುವ.. ಡಾಕ್ಟರ್ ರಾಜ್​ ಕುಮಾರ್​ರ ಮೊಮ್ಮಗ, ಪವರ್ ಸ್ಟಾರ್​ ಪುನೀತ್ ರಾಜ್​ ಕುಮಾರ್ ಉತ್ತರಾಧಿಕಾರಿ ಅಂತ ಕರೆಸಿಕೊಳ್ಳುತ್ತಿರೋ ಯುವ ರಾಜ್​ಕುಮಾರ್ ಯುವ ಸಿನಿಮಾ ಶೂಟಿಂಗ್​ ಮುಗಿಸಿದ್ದಾರೆ.

ದೊಡ್ಮನೆ ಅಭಿಮಾನಿ ವೃಂಧ ಕನಸು ಮನಸಲ್ಲೂ ಜಪ ಮಾಡುತ್ತಿರೋ ಸಿನಿಮಾ ಯುವ.. ಡಾಕ್ಟರ್ ರಾಜ್​ ಕುಮಾರ್​ರ ಮೊಮ್ಮಗ, ಪವರ್ ಸ್ಟಾರ್​ ಪುನೀತ್ ರಾಜ್​ ಕುಮಾರ್ ಉತ್ತರಾಧಿಕಾರಿ ಅಂತ ಕರೆಸಿಕೊಳ್ಳುತ್ತಿರೋ ಯುವ ರಾಜ್​ಕುಮಾರ್ ಯುವ ಸಿನಿಮಾ ಶೂಟಿಂಗ್​ ಮುಗಿಸಿದ್ದಾರೆ. ಇದೀಗ ಯುವ ಸಿನಿಮಾ ಒಂದೊಂದೇ ಸ್ಯಾಂಪಲ್ಸ್​ಗಳು ರಿವೀಲ್ ಆಗೋದಕ್ಕೆ ಟೈಂ ಡೇಟ್​ ಫಿಕ್ಸ್ ಆಗಿದೆ. ಹೀಗಾಗಿ ದೊಡ್ಮನೆ ಅಭಿಮಾನಿಗಳೇ ಅಲರ್ಟ್​. 'ಯುವ' ಉತ್ಸವಕ್ಕೆ ಕೌಂಟ್ ಡೌನ್ ಕಿಕ್ ಸ್ಟಾರ್ಟ್​ ಎನ್ನುತ್ತಿದ್ದಾರೆ. ಯುವ. ಈ ಸಿನಿಮಾ ನಟ ಯುವರಾಜ್​ ಕುಮಾರ್​​​ ಕರಿಯರ್​ನ ಮೊದಲ ಮೆಟ್ಟಿಲು. ಅಪ್ಪು ಫೇವರಿಟ್ ಡೈರೆಕ್ಟರ್ ಸಂತೋಷ್ ಆನಂದ್ ರಾಮ್​ ನಿರ್ದೇಶನದಲ್ಲಿ ಯುವ ಸಿನಿಮಾ ಸಿದ್ಧವಾಗಿದೆ. 

ಕೆಜಿಎಫ್​ ಕಾಂತಾರ, ಸಲಾರ್​ನಂತಹ ಬಿಗ್​ ಹಿಟ್ ಸಿನಿಮಾಗಳನ್ನ ಕೊಟ್ಟಿರೋ ಹೊಂಬಾಳೆ ಬ್ಯಾನರ್​ನಲ್ಲಿ ಯುವ ಸಿನಿಮಾ ಸಿದ್ಧವಾಗಿದೆ.  ಮಾರ್ಚ್​ 29ಕ್ಕೆ ಯುವ ಸಿನಿಮಾ ತೆರೆ ಮೇಲೆ ಬರಲಿದ್ದು, ಅದಕ್ಕು ಮೊದಲು ಸಿನಿಮಾ ಪ್ರಚಾರಕ್ಕೆ ಯುವ ಟೀಂ ಕಿಕ್​ ಸ್ಟಾರ್ಟ್​ ಮಾಡಿದೆ. ಡಾ.ರಾಜ್ ಕುಮಾರ್ ಹುಟ್ಟೂರು ಜಿಲ್ಲೆ ಚಾಮರಾಜನಗರದಲ್ಲಿ ಮಾರ್ಚ್​​ 2ಕ್ಕೆ ಅದ್ಧೂರಿ ಕಾರ್ಯಕ್ರಮ ಮಾಡಿ ಯುವ ಮೊದಲ ಸಾಂಗ್ ರಿಲೀಸ್ ಮಾಡಲಿದ್ದಾರೆ. ಮಾರ್ಚ್ 17ರ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬ. ಪುನೀತ್​ರ ಈ ಬರ್ತ್​​​ಡೇಯನ್ನ ಅದ್ಧೂರಿಯಾಗಿಸೋಕೆ ಮಾರ್ಚ್ 16ರಂದು ಹೊಸಪೇಟೆಯಲ್ಲಿ ಮೆಗಾ ಇವೆಂಟ್ ಆಯೋಜನೆ ಮಾಡಿದ್ದಾರೆ. ಈ ಪ್ರೋಗ್ರಾಂ ಮೂಲಕ ನಟ ಯುವ ರಾಜ್​​ಕುಮಾರ್ ಜೀವನದ ಮಹಾ ಜಾತ್ರೆಗೆ ಸಜ್ಜಾಗ್ತಿದ್ದಾರೆ. ಅಪ್ಪು ಆಶೀರ್ವಾದದೊಂದಿಗೆ ಆ ದಿನ ಯುವ ಟ್ರೈಲರ್ ರಿಲೀಸ್ ಆಗಲಿದೆ. 

Video Top Stories