Asianet Suvarna News Asianet Suvarna News

ಅಪ್ಪು ಸಮಾಜ ಸೇವೆ: ಅಶ್ವಿನಿಗೆ ರಾಜಕೀಯಕ್ಕೆ ಬರಲು ಆಹ್ವಾನ

ರಾಜ್ಯದಲ್ಲಿ ರಾಜಕೀಯದ ಚದುರಂಗದಾಟ ಶುರುವಾಗಿದೆ. ಈ ಹೊತ್ತಲ್ಲಿ ದೊಡ್ಮನೆ ಅಂಗಳದಿಂದ ದೊಡ್ಡ ಸುದ್ದಿಯೊಂದು ಹೊರ ಬಂದಿದೆ.

ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿಗೆ ರಾಜಕೀಯ ಎಂಟ್ರಿಗೆ ಆಹ್ವಾನದ ಕರೆಯೋಲೆ ಬಂದಿದ್ದು, ಇದಕ್ಕೆ ಕಾರಣ ಅಪ್ಪು ಮಾಡಿದ್ದ ಸಮಾಜ ಸೇವೆಯ ಕೆಲಸಗಳು. ಹೀಗಾಗಿ ಅಶ್ವಿನಿಗೆ ರಾಜಕೀಯ ರಂಗ ಪ್ರವೇಶಕ್ಕೆ ಬರುವಂತೆ ವಿವಿಧ ಪಕ್ಷಗಳು ಒತ್ತಡ ಹೇರುತ್ತಿವೆ. ಆದರೆ ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಎಂಟ್ರಿ ಆಗಲ್ಲ ಎನ್ನುವ ಗಟ್ಟಿ ನಿರ್ಧಾರವನ್ನು ಅಶ್ವಿನಿ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷಗಳು ಅಶ್ವಿನಿ ಅವರನ್ನು ರಾಜಕೀಯಕ್ಕೆ ಬರುವಂತೆ ಆಹ್ವಾನಿಸಿವೆ. ಆದ್ರೆ ಇದು ನನ್ನಿಂದ ಸಾಧ್ಯವಿಲ್ಲ ಎಂದು ಅಶ್ವಿನಿ ತಿಳಿಸಿದ್ದಾರೆ.