Asianet Suvarna News Asianet Suvarna News

Radhika Kumaraswamy Dance: ಸ್ಯಾಂಡಲ್‌ವುಡ್ ಸ್ವೀಟಿಯ ಮಸ್ತ್ ಡಾನ್ಸ್ ವೀಡಿಯೋ ವೈರಲ್.!

ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಕ್ರೇಜ್ ಇಂದಿಗೂ ಹಾಗೆ ಇದೆ. ಆಗೊಂದು ಈಗೊಂದು ಸಿನಿಮಾ ಮಾಡಿದ್ರು ಆ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚೇ ಇರುತ್ತೆ. ಇನ್ನು ರಾಧಿಕಾ ಡಾನ್ಸ್ ಅಂದ್ರೆ ಕೇಳ್ಬೇಕಾ..?

ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಕ್ರೇಜ್ ಇಂದಿಗೂ ಹಾಗೆ ಇದೆ. ಆಗೊಂದು ಈಗೊಂದು ಸಿನಿಮಾ ಮಾಡಿದ್ರು ಆ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚೇ ಇರುತ್ತೆ. ಇನ್ನು ರಾಧಿಕಾ ಡಾನ್ಸ್ ಅಂದ್ರೆ ಕೇಳ್ಬೇಕಾ..? ಇವ್ರ ನೃತ್ಯಕ್ಕೆ ಮನಸೋಲದವರೇ ಇಲ್ಲವೇನೋ.? ಇದೀಗ ಮತ್ತೆ ರಾಧಿಕಾ ಫ್ಯಾನ್ಸ್ ಹುಬ್ಬೇರಿಸೋ ಡಾನ್ಸ್ ಮಾಡಿದ್ದಾರೆ ಸ್ವೀಟಿ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿರೋ ರಾಧಿಕಾ ಡಾನ್ಸ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಹಿಂದಿಯ ‘ಮೇರಾ ಯಾರಾ’ದ ಕವರ್ ಸಾಂಗ್ಗೆ ಹೆಜ್ಜೆ ಹಾಕಿರೋ ಸ್ವೀಟಿ ಕಪ್ಪು ಬಣ್ಣದ ಗೌನ್‌ ತೊಟ್ಟು ಮಸ್ತ್ ಡಾನ್ಸ್ ಮಾಡಿದ್ದಾರೆ. ರಾಧಿಕಾರ ಈ ಡಾನ್ಸ್ ವಿಡಿಯೋ ಕೂಡ ಸಾಕಷ್ಟು ಮೆಚ್ಚುಗೆ ಗಳಿಸುತ್ತಿದ್ದು, ಸಿಕ್ಕಾಪಟ್ಟೆ ವೈರಲ್‌ ಆಗಿದೆ

'ಜುಗ್ನು' ಹಾಡಿಗೆ ಡ್ಯಾನ್ಸ್‌ ಮಾಡಿದ ಸ್ಯಾಂಡಲ್‌ವುಡ್‌ ಸ್ವೀಟಿ

ಸದ್ಯ ರಾಧಿಕಾ ಕಾಂಟ್ರಾಕ್ಟ್ (Contract), ರಾಜೇಂದ್ರ ಪೊನ್ನಪ್ಪ (Rajendra Ponappa) ಹಾಗೂ ಭೈರಾದೇವಿ (Bhairadevi) ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಇನ್ನು ರಾಧಿಕಾ ಇತ್ತೀಚೆಗೆ ನಡೆದ ಖಾಸಗಿ ವಾಹಿನಿಯ ವಿಶೇಷ ಕಾರ್ಯಕ್ರಮದಲ್ಲಿ ಕೆಂಗುಲಾಬಿ ಬಣ್ಣದ ಕಾಸ್ಟ್ಯೂಮ್​ ಧರಿಸಿ ಭರ್ಜರಿ ಪರ್ಫಾರ್ಮೆನ್ಸ್​ ನೀಡಿದ್ದಾರೆ. ಹಲವು ಹಾಡುಗಳಿಗೆ ಅವರು ಮನಮೋಹಕವಾಗಿ ಹೆಜ್ಜೆ ಹಾಕಿದ್ದಾರೆ. ಕೊನೆಯದಾಗಿ ರಾಧಿಕಾ ನಟಿಸಿದ ಚಿತ್ರ 'ದಮಯಂತಿ' (Damayanthi) 2019ರಲ್ಲಿ ಬಿಡುಗಡೆಯಾಗಿತ್ತು.