Asianet Suvarna News Asianet Suvarna News

'ಸಿಂಹದ ಮನೆ'ಗೆ ಹೊಸ ರೂಪ: ಹೇಗಿದೆ ಗೊತ್ತಾ ವಿಷ್ಣುದಾದನ 'ವಲ್ಮಿಕಾ'?

ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಹಳೆಯ ಮನೆ ಈಗಿಲ್ಲ. ಅದೇ ಜಾಗದಲ್ಲಿ ಹೊಸ ವಿನ್ಯಾಸದ ಭವ್ಯವಾದ ದೊಡ್ಡ ಬಂಗಲೆ ತಲೆ ಎತ್ತಿದೆ.

ವಿಷ್ಣುದಾದ ಬಾಳಿ ಬದುಕಿ, ಬೆಳೆದು ಅದೆಷ್ಟೋ ನೆನಪುಗಳಿದ್ದ ಸಿಂಹಾಲಯ ಹೊಸ ರೂಪದಲ್ಲಿ ತಲೆ ಎತ್ತಿದೆ. ವಿಷ್ಣುವರ್ಧನ್ ಅವರ ಹಳೆಯ ಮನೆಯನ್ನು ಬೀಳಿಸಿ ಈಗ ಅದೇ ಜಾಗದಲ್ಲಿ ಭವ್ಯವಾದ ಬಂಗಲೆ ನಿರ್ಮಾಣ ಆಗಿದೆ. ವಿಷ್ಣುದಾದನ ಪತ್ನಿ ಭಾರತಿ ವಿಷ್ಣುವರ್ಧನ್ ಈ ಮನೆಯನ್ನು ನವೀಕರಣ ಮಾಡಿದ್ದು, ಈ ಮನೆಯಲ್ಲೂ ದಾದಾ ನೆನಪುಗಳಿಗೆ ಮರು ಜೀವ ಕೊಡಲಾಗಿದೆ. ಬೆಂಗಳೂರಿನ ಜಯನಗರದಲ್ಲಿರುವ ವಿಷ್ಣುವರ್ಧನ್ ಮನೆ ಅಭಿಮಾನಿಗಳಿಗೆ ಟೂರಿಸ್ಟ್ ಸ್ಪಾಟ್ ಆಗಿತ್ತು. ವಿಷ್ಣುವರ್ಧನ್ ಇದ್ದಾಗ ದಿನ ನಿತ್ಯ ನೂರಾರು ಜನ ಇಲ್ಲಿಗೆ ಬಂದು ಹೋಗುತ್ತಿದ್ರು. ಬಿಳಿ ಮತ್ತು ಹಸಿರು ಬಣ್ಣದ ಈ ಬಂಗಲೆಯನ್ನು ವಿಷ್ಣುವರ್ಧನ್ ತಮಗಿಷ್ಟದಂತೆ ಕಟ್ಟಿಸಿಕೊಂಡಿದ್ರು. ಇದೀಗ ವಿಷ್ಣುದಾದನ ಹೊಸ ಮನೆ ಈಗಿನ ಟ್ರೆಂಡ್'ಗೆ ತಕ್ಕಂತೆ ನಿರ್ಮಾಣವಾಗಿದೆ. ಈ ಮನೆಯಲ್ಲಿ ವಿಷ್ಣುವರ್ಧನ್ ಅವರಿಗೆ ಇಷ್ಟವಾದ ಕೆಲವು ಜಾಗಗಳನ್ನು ಹಾಗೆ ಉಳಿಸಿಕೊಳ್ಳಲಾಗಿದೆ. ಮನೆಗೆ ಮೊದಲು ಸಿಂಹದ ಮನೆ ಅಂತ ಹೆಸರಿತ್ತು. ಈಗ ಹೊಸ ರೂಪದಲ್ಲಿ ಸಿದ್ಧವಾಗಿರೋ ಮನೆಗೆ ವಲ್ಮಿಕಾ ಮನೆ ಎಂದು ಹೆಸರಿಡಲಾಗಿದೆ.

ಕಿರುತೆರೆ ನಟಿ ಪ್ರಿಯಾ ಆಚಾರ್ ಮತ್ತು ನಟ ಸಿದ್ದು ಮೂಲಿಮನಿ ಅದ್ಧೂರಿ ನಿಶ್ಚಿತಾರ್ಥ!
 

Video Top Stories