Asianet Suvarna News Asianet Suvarna News

Garuda Gamana Vrishabha Vahana: ರಾಜ್‌ ಬಿ. ಶೆಟ್ಟಿ ಚಿತ್ರವನ್ನು ಹೊಗಳಿದ ಅನುರಾಗ್ ಕಶ್ಯಪ್

ರಿಷಬ್‌ ಶೆಟ್ಟಿ ಹಾಗೂ ರಾಜ್‌ ಬಿ. ಶೆಟ್ಟಿ ಕಾಂಬಿನೇಷನ್‌ನ ಗರುಡಗಮನ ವೃಷಭವಾಹನ ಚಿತ್ರವನ್ನು ಬಾಲಿವುಡ್ ಸ್ಟಾರ್ ಡೈರೆಕ್ಟರ್ ಅನುರಾಗ್ ಕಶ್ಯಪ್ ಮನಸಾರೆ ಮೆಚ್ಚಿಕೊಂಡು ಹಾಡಿ ಹೊಗಳಿದ್ದಾರೆ.

ರಾಜ್‌ ಬಿ. ಶೆಟ್ಟಿ (Raj B Shetty) ಹಾಗೂ ರಿಷಬ್‌ ಶೆಟ್ಟಿ (Rishab Shetty) ಕಾಂಬಿನೇಷನ್‌ನ 'ಗರುಡಗಮನ ವೃಷಭವಾಹನ' (Garuda Gamana Vrishabha Vahana) ಚಿತ್ರವು 'ಜೀ5' (Zee5) ಒಟಿಟಿಯಲ್ಲಿ ಧೂಳೆಬ್ಬಿಸಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಜೀ 5 ಒಟಿಟಿಗೆ ಎಂಟ್ರಿ ಕೊಟ್ಟ ಈ ಸಿನಿಮಾ ಮೂರೇ ದಿನದಲ್ಲಿ ದಾಖಲೆ ಬರೆದಿತ್ತು. ಮೊದಲ ಮೂರು ದಿನಗಳಲ್ಲಿಗಲ್ಲೇ ಬರೋಬ್ಬರಿ 8 ಕೋಟಿ ನಿಮಿಷ ವೀಕ್ಷಣೆ ಕಂಡಿತ್ತು. ಇದೀಗ ಈ ಸಿನಿಮಾವನ್ನು ಬಾಲಿವುಡ್ (Bollywood) ಸ್ಟಾರ್ ಡೈರೆಕ್ಟರ್ ಅನುರಾಗ್ ಕಶ್ಯಪ್ (Anurag Kashyap) ಮೆಚ್ಚಿಕೊಂಡಿದ್ದಾರೆ.

777 ಚಾರ್ಲಿಗೆ ಗುಡ್‌ ನ್ಯೂಸ್‌: ಶೀಘ್ರದಲ್ಲಿ ರಿಲೀಸ್‌ ಡೇಟ್‌ ಹೇಳ್ತೀವಿ ಅಂದ Rakshit Shetty

'ಗರುಡಗಮನ ವೃಷಭವಾಹನ' ಸಿನಿಮಾ ಸಿನಿರಸಿಕರಿಗೂ ಮಾತ್ರವಲ್ಲದೇ ಚಿತ್ರರಂಗದ ಸೆಲೆಬ್ರಿಟಿಗಳಿಗೆ ಇಷ್ಟವಾಗಿದೆ. ಈ ಸಿನಿಮಾವನ್ನು‌ ಅನುರಾಗ್ ಕಶ್ಯಪ್ ಮನಸಾರೆ ಮೆಚ್ಚಿಕೊಂಡು ಹಾಡಿ ಹೊಗಳಿದ್ದಾರೆ. 'ರಾಜ್ ಬಿ ಶೆಟ್ಟಿ ನನ್ನ ನೆಚ್ಚಿನ‌ ನಿರ್ದೇಶಕ. ನ್ಯೂ ಫೇವರಿಟ್ ಫಿಲ್ಮ್ ಮೇಕರ್' ಎಂದಿರುವ ಅನುರಾಗ್ ಕಶ್ಯಪ್, ಅಂಗಮಲಿ ಡೈರೀಸ್, ಪರುತಿವೀರನ್ ಈ ಜಾನರ್​ನಲ್ಲಿ 'ಗರುಡುಗಮನ ವೃಷಭವಾಹನ' ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಎಂದಿದ್ದಾರೆ. ಇತ್ತೀಚೆಗಷ್ಟೇ ಟಾಲಿವುಡ್‌ನ ಸ್ಟಾರ್ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ (Ram Gopal Varma) ಈ ಚಿತ್ರವನ್ನು ಮೆಚ್ಚಿಕೊಂಡಿದ್ದರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment