Asianet Suvarna News Asianet Suvarna News

ಹರಿಕತೆ ಅಲ್ಲ ಗಿರಿಕಥೆ; ರಿಷಬ್ ಶೆಟ್ಟಿ ಚಿತ್ರ ನೋಡಿ ಪ್ರೇಕ್ಷಕರು ಹೇಳಿದ್ದೇನು?

ವಿಭಿನ್ನ ಸ್ಟೋರಿಯನ್ನ ಬೆಳ್ಳಿತೆರೆ ಮೇಲೆ ಕಟ್ಟಿಕೊಡೋ ಶೆಟ್ರು ಈ ಭಾರಿ ಹರಿಕತೆ ಅಲ್ಲ ಗಿರಿಕಥೆ ಅಂತ ಮತ್ತೊಂದು ಇಂಟ್ರೆಸ್ಟಿಂಗ್ ಕಥೆಯನ್ನ ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದಾರೆ. ಶೆಟ್ರ ಹರಿಕತೆ ಅಲ್ಲ ಗಿರಿಕಥೆ ನೋಡಿ ಸಿನಿ ಪ್ರೇಕ್ಷಕರು ಕೂಡ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. 

ಸ್ಯಾಂಡಲ್ ವುಡ್ ಟ್ಯಾಲೆಂಟೆಡ್ ಡೈರೆಕ್ಟರ್ ಕಮ್ ಆ್ಯಕ್ಟರ್ ರಿಷಬ್ ಶೆಟ್ಟಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ರು. ಆ ಸಿನಿಮಾಗಳಲ್ಲೊಂದು ಹರಿಕಥೆ ಅಲ್ಲ ಗಿರಿಕತೆ. ವಿಭಿನ್ನ ಸ್ಟೋರಿಯನ್ನ ಬೆಳ್ಳಿತೆರೆ ಮೇಲೆ ಕಟ್ಟಿಕೊಡೋ ಶೆಟ್ರು ಈ ಭಾರಿ ಹರಿಕತೆ ಅಲ್ಲ ಗಿರಿಕಥೆ ಅಂತ ಮತ್ತೊಂದು ಇಂಟ್ರೆಸ್ಟಿಂಗ್ ಕಥೆಯನ್ನ ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದಾರೆ. ಶೆಟ್ರ ಹರಿಕತೆ ಅಲ್ಲ ಗಿರಿಕಥೆ ನೋಡಿ ಸಿನಿ ಪ್ರೇಕ್ಷಕರು ಕೂಡ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಹರಿಕಥೆ ಅಲ್ಲ ಗಿರಿಕಥೆ ಅಸಿಸ್ಟೆಂಟ್ ಡೈರೆಕ್ಟರ್ಗಳ ಸ್ಟೋರಿಯ ಸುತ್ತ ಹೆಣೆದಿರೋ ಸಿನಿಮಾ. ಚಿತ್ರರಂಗದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಗಳ ಸ್ಥಿತಿ, ಒಬ್ಬ ನಿರ್ದೇಶಕ ಅಸಿಸ್ಟೆಂಟ್ ನಿರ್ದೇಶಕನನ್ನ ಹೇಗೆ ನಡೆಸಿಕೊಳ್ತಾರೆ? ಹೀಗೆ ಸಹಾಯಕ ನಿರ್ದೇಶಕರ ಹಲವು ಇಂಟ್ರೆಸ್ಟಿಂಗ್ ಕಥೆಯ ಜೊತೆ ಲವ್ ಸ್ಟೋರಿ ಕೂಡ ಸಿನಿಮಾದಲ್ಲಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ತಪಸ್ವಿನಿ ಅಭಿನಿಯಿಸಿದ್ದು, ಸಂದೇಶ್ ನಾಗರಾಜ್ ಬ್ಯಾನರ್ ನಟಿ ನಿರ್ಮಾಣ ಆಗಿರೋ ಚಿತ್ರಕ್ಕೆ ಕರಣ್ ಅನಂತ್ ಮತ್ತು ಅನಿರುದ್ಧ ಇಬ್ಬರು ನಿರ್ದೇಶನ ಮಾಡಿದ್ದಾರೆ. ಇದು ಪಕ್ಕಾ ಕಾಮಿಡಿ ಚಿತ್ರವಾಗಿದ್ದು, ಅಜನಿಶ್ ಲೋಕನಾಥ್ ಸಂಗೀತ ಸಂಯೋಜನೆ ಚಿತ್ರದ ವೈಭವ ಹೆಚ್ಚಿಸಿದೆ. ಶೆಟ್ರ ಈ ಸ್ಪೆಷಲ್ ಸಿನಿಮಾವನ್ನ ಈಗ ಪ್ರೇಕ್ಷಕ ಕೊಂಡಾಡುತ್ತಿದ್ದಾರೆ.