Asianet Suvarna News Asianet Suvarna News

Priyanka Upendra: 'ಡಿಟೆಕ್ವೀವ್ ತೀಕ್ಷ್ಣ ಕಥೆಯನ್ನ ಉಪ್ಪಿಗೆ ಹೇಳಿಲ್ಲ'

ಕನ್ನಡದಲ್ಲೂ 50 ಸಿನಿಮಾ ಮಾಡೋ ಆಸೆ ಇದೆ. ಸ್ಟಂಟ್ ಮಾಡೋದನ್ನ ಕಲಿಯುತ್ತಿದ್ದೇನೆ. 'ಡಿಟೆಕ್ವೀವ್ ತೀಕ್ಷ್ಣ' ಕಥೆಯನ್ನ ಉಪ್ಪಿಗೆ ಹೇಳಿಲ್ಲ. ಡಿಟೆಕ್ವೀವ್ ತೀಕ್ಷ್ಣ ಪ್ಯಾನ್ ಇಂಡಿಯಾ ಸಿನಿಮಾ ಎಂದು ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ.

ಕನ್ನಡ, ತೆಲುಗು, ತಮಿಳು ಹಾಗೂ ಬಂಗಾಳಿ ಸಿನಿಮಾಗಳು ಸೇರಿ ಪ್ರಿಯಾಂಕಾ ಉಪೇಂದ್ರ (Priyanka Upendra) ಅವರ 50ನೇ ಸಿನಿಮಾ 'ಡಿಟೆಕ್ಟೀವ್ ತೀಕ್ಷ್ಣ' (Detective Teekshna) ಆಗಿದೆ. ಪ್ರಿಯಾಂಕಾ ಅವರ ಪತಿ ಉಪೇಂದ್ರ ಅವರು ಚಿತ್ರದ ಮೋಷನ್ ಪೋಸ್ಟರನ್ನು (Motion Poster) ಅನಾವರಣ ಮಾಡುವ ಮೂಲಕ ‌ಪತ್ನಿ ಪ್ರಿಯಾಂಕಾ ಜೊತೆಗೆ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಟಿ ಪ್ರಿಯಾಂಕಾ ಉಪೇಂದ್ರ ಮಾತನಾಡಿ, ನಾನು ಮದುವೆ ಆದ ಮೇಲೆ ಕೆಲ ಯುವ ನಿರ್ದೇಶಕರು ಮಹಿಳಾ ಪ್ರಧಾನ ಕಥೆಗಳನ್ನು ಮಾಡಿ ನನ್ನ ಕೈಯಲ್ಲಿ ಆ್ಯಕ್ಟ್ ಮಾಡಿಸುತ್ತಿರುವುದು ನನಗೆ ಹೆಮ್ಮ. 

Priyanka Upendra: 'ಡಿಟೆಕ್ಟೀವ್ ತೀಕ್ಷ್ಣ' ಫಸ್ಟ್‌ಲುಕ್ ಲಾಂಚ್ ಮಾಡಿದ ಉಪೇಂದ್ರ!

ಅದೇ ರೀತಿಯ ಸಿನಿಮಾ 'ಡಿಟೆಕ್ಟಿವ್​​ ತೀಕ್ಷ್ಣ' ಆಗಿದೆ. ಆ್ಯಕ್ಷನ್ ಜೊತೆಗೆ ಆ್ಯಕ್ಟಿಂಗ್ ಮಾಡೋದು ಚಾಲೇಂಜ್ ಆಗಿದೆ. ನನಗೆ ನಟನೆ ತುಂಬಾ ಇಷ್ಟ. ’ಉಗ್ರಾವತಾರ’ದಲ್ಲಿ ಆಕ್ಷನ್ ಇದೆ. ಅದರಂತೆ ಇದರಲ್ಲಿ ಬೇರೆ ತರಹ ಕಾಣಿಸಿಕೊಳ್ಳುತ್ತೇನೆ. ಮಾತ್ರವಲ್ಲದೇ ಕನ್ನಡದಲ್ಲೂ 50 ಸಿನಿಮಾ ಮಾಡೋ ಆಸೆ ಇದೆ. ಸ್ಟಂಟ್ ಮಾಡೋದನ್ನ ಕಲಿಯುತ್ತಿದ್ದೇನೆ. ಡಿಟೆಕ್ವೀವ್ ತೀಕ್ಷ್ಣ ಕಥೆಯನ್ನ ಉಪ್ಪಿಗೆ ಹೇಳಿಲ್ಲ. ಡಿಟೆಕ್ವೀವ್ ತೀಕ್ಷ್ಣ ಪ್ಯಾನ್ ಇಂಡಿಯಾ ಸಿನಿಮಾ ಎಂದು ಪ್ರಿಯಾಂಕಾ ಉಪೇಂದ್ರ ಸಂತಸವನ್ನು ಹಂಚಿಕೊಂಡರು.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies