Asianet Suvarna News Asianet Suvarna News

ಬಿಜೆಪಿ -ಕಾಂಗ್ರೆಸ್‌ ಗಲಾಟೆ: ಬೇಲಿಯೇ ಎದ್ದು ಹೊಲ ಮೇದಂತಾಗಿದೆ : ಸೋಮಣ್ಣ ಆಕ್ರೋಶ

ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆಗೆ ಸೋಮಣ್ಣ ಆಕ್ರೋಶ
ಈ ರೀತಿಯ ಘಟನೆಯನ್ನು ನಾವು ಸಹಿಸಲು ಸಾಧ್ಯವಿಲ್ಲ 
ಬೇಲಿಯೇ ಎದ್ದು ಹೊಲ ಮೇದಂತೆ ಆಗಿದೆ ಎಂದ ಸೋಮಣ್ಣ

First Published Apr 28, 2023, 1:17 PM IST | Last Updated Apr 28, 2023, 1:17 PM IST

ಮೈಸೂರು: ಸಿದ್ದರಾಮನ ಹುಂಡಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ವಿ. ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆಯಲ್ಲಿ ಬಿಜೆಪಿ ಕಾರ್ಯಕರ್ತ ನಾಗೇಶ್‌ ಗಾಯಗೊಂಡಿದ್ದು, ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಲಿಯೇ ಎದ್ದು ಹೊಲ ಮೇದಂತೆ ಆಗಿದೆ. ನಾಯಕರೇ ಗಲಭೆ ಎಬ್ಬಿಸಿದರೆ ಸಾಮಾನ್ಯರ ಪರಿಸ್ಥಿತಿ ಏನು? ಎಂದು ಪ್ರಶ್ನಿಸಿದ್ದಾರೆ. ಈ ರೀತಿಯ ಘಟನೆಗಳನ್ನು ನಾವು ಸಹಿಸುವುದಿಲ್ಲ. ಕಾನೂನನ್ನು ಕಾಪಾಡುವುದನ್ನು ವಿರೋಧ ಮತ್ತು ಆಡಳಿತ ಪಕ್ಷಗಳ ಕರ್ತವ್ಯವಾಗಿದೆ ಎಂದು ವಿ. ಸೋಮಣ್ಣ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ಸಿದ್ದರಾಮನ ಹುಂಡಿ ಏನು ಸಿದ್ದರಾಮಯ್ಯ ಸಂಸ್ಥಾನನಾ?: ಪ್ರತಾಪ್ ಸಿಂಹ ಆಕ್ರೋಶ