Assembly election: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ರಣೋತ್ಸಾಹ ಎಬ್ಬಿಸಿದ A..B..C ಫಾರ್ಮುಲಾ..!
ಕಾಂಗ್ರೆಸ್ ಈ ಬಾರಿ ಟಿಕೆಟ್ ಹಂಚಿಕೆಗೆ ಹೊಸ ತಂತ್ರವನ್ನು ರೂಪಸಿದ್ದು, ಟಿಕೆಟ್ ಫೈಟ್ ಜೋರಾಗಿದೆ. ಈ ವೇಳೆ ಹೊಸ A..B..C ಫಾರ್ಮುಲಾವನ್ನು ಕಂಡುಕೊಂಡಿರುವ ಕಾಂಗ್ರೆಸ್ ನಾಯಕರು ಮೂರು ಕೆಟಗರಿಯಲ್ಲಿ ಟಿಕೆಟ್ ಹಂಚಿಕೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಬೆಂಗಳೂರು (ಜ.05): ರಾಜ್ಯದ ವಿಧಾನಸಭಾ ಚುನಾವಣೆ ಇನ್ನೇನು 100 ದಿನಗಳಲ್ಲಿ ಘೋಷಣೆಯಾಗಲಿದೆ. ಆದರೆ, ಕಾಂಗ್ರೆಸ್ ಈ ಬಾರಿ ಟಿಕೆಟ್ ಹಂಚಿಕೆಗೆ ಹೊಸ ತಂತ್ರವನ್ನು ರೂಪಸಿದ್ದು, ಅರ್ಜಿ ಹಾಕಿದವರಿಗಷ್ಟೇ ಟಿಕೆಟ್ ನೀಡವುದಾಗಿ ತಿಳಿಸಿತ್ತು. ಹೀಗಾಗಿ, ಒಂದು ಕ್ಷೇತ್ರಕ್ಕೆ ನಾಲ್ಕು ಪಟ್ಟು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು ಟಿಕೆಟ್ ಫೈಟ್ ಜೋರಾಗಿದೆ. ಈ ವೇಳೆ ಹೊಸ ಫಾರ್ಮುಲಾವನ್ನು ಕಂಡುಕೊಂಡಿರುವ ಕಾಂಗ್ರೆಸ್ ನಾಯಕರು ಮೂರು ಕೆಟಗರಿಯಲ್ಲಿ ಟಿಕೆಟ್ ಹಂಚಿಕೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
Assembly election: ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಮೂರು ಫಾರ್ಮುಲಾ!: ಯಾರಿಗೆ ಸಿಗುತ್ತೆ ಟಿಕೆಟ್..?
ರಾಜ್ಯದಲ್ಲಿ ಯಾವ ಕ್ಷೇತ್ರದಲ್ಲಿ ಯಾರಿಗೆ ಕಾಂಗ್ರೆಸ್ ಟಿಕೆಟ್ ಸಿಗಲಿದೆ ಎನ್ನುವುದು ಅತ್ಯಂತ ಕ್ಲಿಷ್ಟಕರವಾದ ಪ್ರಶ್ನೆಯಾಗಿದೆ. ಈಗಾಗಲೇ ಗುಜರಾತ್‌ನಲ್ಲಿ ಬಿಜೆಪಿ ಅಳವಡಿಸಿಕೊಂಡ ಮಾದರಿಯನ್ನು ಅಳವಡಿಕೆ ಮಾಡುವುದು ಹಾಗೂ ಗೆಲ್ಲುವ ಕುದುರೆಗಳನ್ನಷ್ಟೇ ಅಖಾಡಕ್ಕೆ ಇಳಿಸುವ ಬಗ್ಗೆ ಚರ್ಚೆ ಮಾಡಲಾಗಿದೆ. ಆದರೆ, ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ರಾಜ್ಯ ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಮತ್ತೊಂದು ಹೊಸ ಫಾರ್ಮುಲಾ ಕಂಡುಕೊಂಡಿದೆ. ಅದೇನೆಂದರೆ ಎಲ್ಲ 224 ವಿಧಾನಸಭಾ ಕ್ಷೇತ್ರಗಳ ಟಿಕೆಟ್‌ಗಳನ್ನು ಎ,ಬಿ,ಸಿ ಕೆಟಗರಿ ಆಧಾರದಲ್ಲಿ ಟಿಕೆಟ್ ಘೋಷಣೆ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.