Asianet Suvarna News Asianet Suvarna News

ಬಗೆಹರಿಯದ ವಿಪಕ್ಷ ನಾಯಕನ ಆಯ್ಕೆ ಕಗ್ಗಂಟು: ಬಿಜೆಪಿ ನಾಯಕರು ಗಪ್‌ಚುಪ್

ಬಿಜೆಪಿಯಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆ ಕಗ್ಗಂಟು ಇನ್ನೂ ಬಗೆಹರಿದಿಲ್ಲ. ಪ್ರತಿಪಕ್ಷ ನಾಯಕ ಆಯ್ಕೆ ಬಗ್ಗೆ ಕೇಂದ್ರದ ನಾಯಕರು ಯಾವುದೇ ಹೇಳಿಕೆನ್ನ ನೀಡುತ್ತಿಲ್ಲ. ಎರಡು ತಿಂಗಳಾದ್ರೂ ಬಿಜೆಪಿ ಹೈಕಮಾಂಡ್‌ ಮಾತ್ರ ತುಟಿ ಪಿಟಕ್‌ ಅಂತಿಲ್ಲ. 

ಬೆಂಗಳೂರು(ಜು.28): ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿ ಎರಡು ತಿಂಗಳು ಕಳೆದಿವೆ. ಆದರೆ, ಪ್ರತಿಪಕ್ಷ ನಾಯಕನ ಆಯ್ಕೆ ಇನ್ನೂ ಆಗಿಲ್ಲ. ಬಿಜೆಪಿ ಪಾಲಿಗೆ ಭಾರೀ ಮುಜುಗರದ ವಿಚಾರವಾಗಿದೆ. ಬಿಜೆಪಿಯಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆ ಕಗ್ಗಂಟು ಇನ್ನೂ ಬಗೆಹರಿದಿಲ್ಲ. ಪ್ರತಿಪಕ್ಷ ನಾಯಕ ಆಯ್ಕೆ ಬಗ್ಗೆ ಕೇಂದ್ರದ ನಾಯಕರು ಯಾವುದೇ ಹೇಳಿಕೆನ್ನ ನೀಡುತ್ತಿಲ್ಲ. ಎರಡು ತಿಂಗಳಾದ್ರೂ ಬಿಜೆಪಿ ಹೈಕಮಾಂಡ್‌ ಮಾತ್ರ ತುಟಿ ಪಿಟಕ್‌ ಅಂತಿಲ್ಲ. ರಾಜ್ಯ ನಾಯಕರಿಗೆ ಈ ಬಗ್ಗೆ ಯಾವುದೇ ಸೂಚನೆ ಬಂದಿಲ್ಲ. ದೆಹಲಿ ಮಟ್ಟದ ನಾಯಕರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚರ್ಚೆ ನಡೆಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ವಿವಿಧ ನಾಯಕರೊಂದಿಗೆ ಮಾತುಕತೆ ನಡೆದಿದೆ.

ಶಾಸಕರು Vs ಸಚಿವರ 'ಪತ್ರ ಸಮರ': ವಿಚಲಿತರಾದ್ರ ರಾಹುಲ್‌ ಗಾಂಧಿ?