Asianet Suvarna News Asianet Suvarna News

ಶಾಸಕರು Vs ಸಚಿವರ 'ಪತ್ರ ಸಮರ': ವಿಚಲಿತರಾದ್ರ ರಾಹುಲ್‌ ಗಾಂಧಿ?

ಶಾಸಕರ ಅಸಮಾಧಾನ ಶಮನಕ್ಕೆ ರಾಹುಲ್‌ ಗಾಂಧಿ ಸಭೆ ಕರೆದಿದ್ದಾರೆ. ಆ.2 ರಂದು ದೆಹಲಿಯಲ್ಲಿ ಎಲ್ಲ ಮಂತ್ರಿಗಳ ಸಭೆಯನ್ನ ಕರೆದಿದ್ದಾರೆ. ಶಾಸಕರ ಅಸಮಾಧಾನದಿಂದ ರಾಹುಲ್ ಗಾಂಧಿ ವಿಚಲಿತಗೊಂಡಿದ್ದಾರೆ.

ಬೆಂಗಳೂರು(ಜು.28): ಕಾಂಗ್ರೆಸ್‌ನಲ್ಲಿ ಶಾಸಕರು Vs ಸಚಿವರ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸಾಕಷ್ಟು ಸಭೆಗಳನ್ನ ಮಾಡಿ ಎಲ್ಲರನ್ನ ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ಆದ್ರೆ, ಈ ಬೆಳವಣಿಗೆ ಕಾಂಗ್ರೆಸ್‌ ಹೈಕಮಾಂಡ್‌ನ ನಿದ್ದೆಗೆಡಿಸಿದೆ. ಹೀಗಾಗಿ ಶಾಸಕರ ಅಸಮಾಧಾನ ಶಮನಕ್ಕೆ ರಾಹುಲ್‌ ಗಾಂಧಿ ಸಭೆ ಕರೆದಿದ್ದಾರೆ. ಆ.2 ರಂದು ದೆಹಲಿಯಲ್ಲಿ ಎಲ್ಲ ಮಂತ್ರಿಗಳ ಸಭೆಯನ್ನ ಕರೆದಿದ್ದಾರೆ. ಶಾಸಕರ ಅಸಮಾಧಾನದಿಂದ ರಾಹುಲ್ ಗಾಂಧಿ ವಿಚಲಿತಗೊಂಡಿದ್ದಾರೆ. ದೇಶದಲ್ಲಿ ಮುಳುಗುತ್ತಿದ್ದ ಕಾಂಗ್ರೆಸ್‌ಗೆ ಆಸರೆ ನೀಡಿದ್ದೇ ಕರ್ನಾಟಕ. ಕರ್ನಾಟಕದ ಗೆಲುವಿನ ಬಳಿಕ ಹೈಕಮಾಂಡ್‌ಗೆ ಬಲ ಹೆಚ್ಚಿತ್ತು. ಅಧಿಕಾರಕ್ಕೇರಿದ ಎರಡೇ ತಿಂಗಳಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.  

Udupi Files: ನೇತ್ರಾ ಕಾಲೇಜ್‌ ವಿದ್ಯಾರ್ಥಿನಿಯಿಂದ ಸ್ಫೋಟಕ ಆರೋಪ..!