ಸಿಎಲ್‌ಪಿ ಸಭೆ ಬಳಿಕ ಮತ್ತೆ ದೆಹಲಿಗೆ ಸಿದ್ದರಾಮಯ್ಯ? ಪೂರ್ಣ ಪ್ರಮಾಣದ ಸಚಿವ ಸಂಪುಟದ ಜತೆ ಪ್ರಮಾಣವಚನ!

ಸಭೆಯ ನಂತರ ನಾಳೆ ಮತ್ತೆ ಸಿದ್ದರಾಮಯ್ಯ ದೆಹಲಿಗೆ ಹೋಗಿ ಪೂರ್ಣ ಪ್ರಮಾಣದ ಸಚಿವ ಸಂಪುಟದ ಬಗ್ಗೆ ಕೈ ಹೈಕಮಾಂಡ್‌ ಜತೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗ್ತಿದೆ.

First Published May 18, 2023, 1:52 PM IST | Last Updated May 18, 2023, 1:52 PM IST

ಕರ್ನಾಟಕದ ಮುಂದಿನ ಸಿಎಂ ಆಗಿ ಸಿದ್ದರಾಮಯ್ಯ ಆಯ್ಕೆ ಖಚಿತಗೊಂಡಿದೆ. ಇನ್ನು, ಇಂದು ಸಂಜೆ 7 ಗಂಟೆಗೆ ಬೆಂಗಳೂರಲ್ಲಿ ಸಿಎಲ್‌ಪಿ ಸಭೆ ನಡೆಸಲಿದೆ. ಈ ಸಭೆಗೆ ಶಾಸಕರು, ಪರಿಷತ್‌ ಸದಸ್ಯರು ಹಾಗೂ ಸಂಸದರಿಗೆ ಆಹ್ವಾನಿಸಲಾಗಿದೆ. ಈ ಸಭೆಯ ನಂತರ ನಾಳೆ ಮತ್ತೆ ಸಿದ್ದರಾಮಯ್ಯ ದೆಹಲಿಗೆ ಹೋಗಿ ಪೂರ್ಣ ಪ್ರಮಾಣದ ಸಚಿವ ಸಂಪುಟದ ಬಗ್ಗೆ ಕೈ ಹೈಕಮಾಂಡ್‌ ಜತೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗ್ತಿದೆ.  ಹಾಗೆ, ನಾಳೆಯೇ ಸಂಪುಟವನ್ನು ಫೈನಲ್‌ ಮಾಡ್ತಾರೆ ಎಂದೂ ತಿಳಿದುಬಂದಿದೆ. ಪೂರ್ಣ ಪ್ರಮಾಣದ ಸಂಪುಟದ ಜತೆ ಪ್ರಮಾಣವಚನ ನಡೆಸಲು ಸಿದ್ದರಾಮಯ್ಯ ಪ್ಲ್ಯಾನ್‌ ಮಾಡಿದ್ದಾರೆ ಎಂದೂ ತಿಳಿದುಬಂದಿದೆ.

 

Video Top Stories