ಡಿಕೆಶಿ Vs ಜಾರಕಿಹೊಳಿ ಗುದ್ದಾಟ..ಬೆಳಗಾವಿಗೆ ಬಂದ ಡಿಸಿಎಂ ಡಿಕೆಶಿ: ಸ್ವಾಗತಕ್ಕೆ ಬಾರದ ಕೈ ಶಾಸಕರು..!
ಪ್ರಚಂಡ ಬಹುಮತದ ಕೈ ಸರ್ಕಾರಕ್ಕೆ B ಬಾಂಬ್ ಭಯ..!
ಆ ಸೈಲೆಂಟ್ ಸುನಾಮಿಗೆ ಬೆಚ್ಚಿ ಬೆದ್ದಿದೆ ಕಾಂಗ್ರೆಸ್ ಪಡೆ..!
ಸಣ್ಣ ಕಿಡಿ ಜ್ವಾಲಾಮುಖಿಯಾದ್ರೆ ಸರ್ಕಾರಕ್ಕೆ ಕಂಟಕ ಫಿಕ್ಸ್..!
ರಾಜ್ಯದಲ್ಲೀಗ ಅಧಿಕಾರದಲ್ಲಿರೋದು ಜೋಡೆತ್ತು ಸರ್ಕಾರ. ಈ ಸರ್ಕಾರಕ್ಕೆ ಸಿದ್ದರಾಮಯ್ಯ(Siddaramaiah) ಅಧಿಪತಿ. ಸರ್ಕಾರದ ಸುತ್ತ ಕೋಟೆ ಕಟ್ಟಿ ಕಾವಲಿಗೆ ನಿಂತಿರೋದು ಕಾಂಗ್ರೆಸ್ ಕಟ್ಟಪ್ಪ ಡಿ.ಕೆ ಶಿವಕುಮಾರ್(DK Shivakumar). ಇಬ್ಬರೂ ಚತುರರು, ಇಬ್ಬರೂ ಚಾಣಾಕ್ಷರು. ಹೀಗಾಗಿ 135 ಶಾಸಕರ ಬಲವನ್ನು ಹೊಂದಿರೋ ಈ ಸರ್ಕಾರವನ್ನು ಹೊರಗಿನವರು ಯಾರೂ ಬೀಳಿಸೋಕೆ ಸಾಧ್ಯಾನೇ ಇಲ್ಲ. ಯಾಕಂದ್ರೆ ಕಾಂಗ್ರೆಸ್(Congress) ಬಳಿ ಇರೋದು ಬರೀ ಬಹುಮತ ಅಲ್ಲ, ಪ್ರಚಂಡ ಬಹುಮತ. ದೇಶವೇ ತಿರುಗಿ ನೋಡುವಂತೆ ಗೆದ್ದು ರಾಜ್ಯದಲ್ಲಿ ಸರ್ಕಾರ ರಚಿಸಿರುವ ಕಾಂಗ್ರೆಸ್‌ಗೆ ಆಪರೇಷನ್ ಭಯವಂತೂ ಇಲ್ಲ. ಆದ್ರೂ ಕಾಂಗ್ರೆಸ್‌ನಲ್ಲೊಂದು ಕಂಪನ ಶುರುವಾಗಿದೆ. ಆ ಕಂಪನಕ್ಕೆ ಕಾರಣ ಬಿ ಬಾಂಬ್. ರಾಜ್ಯ ರಾಜಕಾರಣದಲ್ಲಿ ಹಿಂದೊಮ್ಮೆ ಸುನಾಮಿ ಎಬ್ಬಿಸಿದ್ದ ಬಾಂಬ್. ಒಂದು ಸರ್ಕಾರವನ್ನೇ ಕೆಡವಿ ಮತ್ತೊಂದು ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾಗಿದ್ದ ಬಾಂಬ್ ಇದು. ನಾವು ಹೇಳೋದಕ್ಕೆ ಹೊರಟಿರೋ B ಬಾಂಬ್ ಇದೆ. ಬೆಳಗಾವಿ ಬಾಂಬ್. ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿ ಬೆಳಗಾವಿ ಬಾಂಬ್ ಮತ್ತೆ ಸದ್ದು ಮಾಡ್ತಾ ಇದೆ. ಬೆಳಗಾವಿ ರಾಜಕಾರಣದ ಖದರೇ ಅಂಥದ್ದು. ಅಲ್ಲಿ ಶುರುವಾಗೋ ಕಂಪನ, ರಾಜ್ಯ ರಾಜಕಾರಣದಲ್ಲಿ ಭೂಕಂಪಕ್ಕೇ ಕಾರಣವಾಗಿ ಬಿಡತ್ತೆ. ಅಂಥದ್ದೇ ಒಂದು ಕಂಪನವೀಗ ಕಾಂಗ್ರೆಸ್ ಸರ್ಕಾರದ ಬುಡದಲ್ಲಿ ಶುರುವಾಗಿದೆ. ಇದ್ರ ಸೂತ್ರಧಾರ ಜಾರಕಿಹೊಳಿ(Satish Jarkiholi) ಕುಟುಂಬದ ಸೈಲೆಂಟ್ ಸಾಹುಕಾರ ಖ್ಯಾತಿಯ ಸತೀಶ್ ಜಾರಕಿಹೊಳಿ.
ಇದನ್ನೂ ವೀಕ್ಷಿಸಿ: ಇಸ್ರೇಲ್ ವಿರುದ್ಧ ಮರುಕಳಿಸುತ್ತಾ 1948ರ ಅರಬ್ ಯುದ್ಧ..? ತೈಲ ನಿರ್ಬಂಧ ಹೇರುವಂತೆ ಇರಾನ್ ಒತ್ತಾಯ..!