Asianet Suvarna News Asianet Suvarna News

ಗೋಕಾಕ್‌ನಲ್ಲಿದ್ದಾರಂತೆ ಸೀಕ್ರೆಟ್ ವೋಟರ್ಸ್, ಇವ್ರೇ ಅಂತೆ ಕಿಂಗ್‌ಮೇಕರ್ಸ್!

ಗೋಕಾಕ್ ಚುನಾವಣಾ ಕಣದಲ್ಲಿ ಸಹೋದರರ ನಡುವೆ ಮತ ಕಾಳಗ | ರಮೇಶ್ ವಿರುದ್ಧ ತೊಡೆತಟ್ಟಿರುವ  ತಮ್ಮ ಲಖನ್ | ಸೀಕ್ರೆಟ್‌ ವೋಟರ್ಸ್ ಬಗ್ಗೆ ಬಾಯ್ಬಿಟ್ಟ ಸತೀಶ್

ಬೆಳಗಾವಿ (ನ.30): ಗೋಕಾಕ್ ಚುನಾವಣಾ ಕಣ ಜಾರಕಿಹೊಳಿ ಕುಟುಂಬದ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ಬಿಜೆಪಿಯಿಂದ ಅನರ್ಹ ಶಾಸಕ ರಮೆಶ್ ಜಾರಕಿಹೊಳಿ ಅಖಾಡಕ್ಕಿಳಿದಿದ್ದರೆ,  ಅವರ ತಮ್ಮ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ತೊಡೆತಟ್ಟಿದ್ದಾರೆ.

ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ಇನ್ನೊಬ್ಬ ಸಹೋದರ, ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ಕುತೂಹಲಕಾರಿ ವಿಚಾರವನ್ನು ಬಹಿರಂಗಪಡಿಸಿದರು. ಏನದು? ಇಲ್ಲಿದೆ ವಿವರ....

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಡಿ.05ಕ್ಕೆ ಉಪಚುನಾವಣೆ ನಡೆಯಲಿದೆ. ಒಟ್ಟು 165 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಡಿ.09ಕ್ಕೆ ಭವಿಷ್ಯ ನಿರ್ಧಾರವಾಗಲಿದೆ.