Asianet Suvarna News Asianet Suvarna News

ನನ್ನ ಹಾಳು ಮಾಡೋಕೆ ನೀವು ಈ ಕೆಲಸ ಮಾಡ್ತಿರೋದು: ಡಿಕೆಶಿ ಗರಂ

Jul 18, 2021, 5:43 PM IST

ಬಾಗಲಕೋಟೆ, (ಜು.18): ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ವಿವಾದ ಸದ್ಯಕ್ಕೆ ಸುಖಾಂತ್ಯವಾಗಿದೆ. ಇದರ ಬೆನ್ನಲ್ಲೇ ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೋದಲ್ಲೆಲ್ಲಾ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ. 

'ಬಿಜೆಪಿ ಹಾಲಿ ಶಾಸಕರುಗಳು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೇಳುತ್ತಿದ್ದಾರೆ'

ಹೌದು...ಡಿಕೆ ಡಿಕೆ ಅಂತ ಕೂಗಿದಕ್ಕೆ ಕೂಗಬೇಡ್ರಪ್ಪಾ ಎಂದಿದ್ದಾರೆ. ನನ್ನ ಹಾಳು ಮಾಡೋಕೆ ನೀವು ಈ ಕೆಲಸ ಮಾಡ್ತಿರೋದು. ಈಗಲೇ ಕೂಗಿ ನನ್ನ ಹಾಳು ಮಾಡಬೇಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿರುವ ಪ್ರಸಂಗ ನಡೆದಿದೆ.