Asianet Suvarna News Asianet Suvarna News

ಹಲಾಲ್ ವಿಚಾರವಾಗಿ ಖಾಸಗಿ ಬಿಲ್ ಮಂಡಿಸಲು ರವಿಕುಮಾರ್ ಸಿದ್ಧತೆ

ಹಲಾಲ್ ವಿಚಾರವಾಗಿ ಖಾಸಗಿ ಬಿಲ್ ಮಂಡಿಸಲು ಸಭಾಪತಿಗೆ ಪತ್ರ ಬರೆದಿದ್ದೇನೆ. ಈ ಕುರಿತು ಸಭಾಪತಿ ಅವಕಾಶ ನೀಡಿದರೆ ನಾನು ಬಿಲ್ ಮಂಡಿಸುತ್ತೇ‌ನೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ತಿಳಿಸಿದ್ದಾರೆ.

ಬೆಂಗಳೂರು (ಡಿ.14): ರಾಜ್ಯದಲ್ಲಿ ಹಲಾಲ್ ವಿಚಾರವಾಗಿ ಖಾಸಗಿ ಬಿಲ್ ಮಂಡಿಸಲು ಸಭಾಪತಿಗೆ ಪತ್ರ ಬರೆದಿದ್ದೇನೆ. ಈ ಕುರಿತು ಸಭಾಪತಿ ಅವಕಾಶ ನೀಡಿದರೆ ನಾನು ಬಿಲ್ ಮಂಡಿಸುತ್ತೇ‌ನೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಲಾಲ್ ಮುದ್ರೆ ಹಾಕುವ ಪದ್ದತಿ ಕೇವಲ ಮಾಂಸಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಆಸ್ಪತ್ರೆ, ಅನೇಕ ಖಾದ್ಯ, ಬೇರೆ ಬೇರೆ ಕಡೆಗಳಲ್ಲೂ ಹಲಾಲ್ ಮುದ್ರೆ ಜಾರಿಯಲ್ಲಿ ಇದೆ. ಉತ್ಪನ್ನಗಳ ಬಗ್ಗೆ ಸರ್ಟಿಫಿಕೇಟ್ ಮಾಡೋಕೆ ಇವರು ಯಾರು? ಎಂದು ನಾನು ರಾಜ್ಯ ಸರ್ಕಾರವನ್ನು ಕೇಳಲು ಬಯಸುತ್ತೇನೆ. ಇವರು ಸರ್ಟಿಫಿಕೇಟ್ ನೀಡಿದರೆ ಫುಡ್ ಡಿಪಾರ್ಟ್ಮೆಂಟ್ ಕೆಲಸ ಏನು? ಫುಡ್ ಸರ್ಟಿಫಿಕೇಟ್ ನೀಡೊದು ಫುಡ್ ಡಿಪಾರ್ಟ್‌ಮೆಂಟ್ ಆಗಿದೆ. ಆದರೆ, ಹಲಾಲ್ ಸರ್ಟಿಫಿಕೇಟ್ ನೀಡೊಕೆ ಮುಂದಾದರೆ ಆಹಾರ ಇಲಾಖೆ ಕೆಲಸ ಏನು? ಎನ್ನುವುದು ತಿಳಿಯುತ್ತಿಲ್ಲ. 

Assembly election: ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‌ ಮಾರಕ: ರವಿಕುಮಾರ್‌

ಹಲಾಲ್ ಗೆ ಮುಖ್ಯ ಅಥಾರಿಟಿ ಏನು? ಇನ್ನು ದೇಶದಲ್ಲಿ ನಡೆಯುತ್ತಿರುವ ಹಲಾಲ್ ಸಂಸ್ಥೆಯ ವ್ಯಾಪ್ತಿ ಎಷ್ಟು? ಕಿರಾಣಿ ಅಂಗಡಿ ಮೇಲೆ ಹಾಗೂ ಆಸ್ಪತ್ರೆಗೂ ಹಾಲಾಲ್ ಸರ್ಟಿಫಿಕೇಟ್ ನೀಡುತ್ತಾರೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಆಗುತ್ತಿದೆ. ತೆರಿಗೆ ಮೂಲಕ ಬರಬೇಕಾದ ಹಣ ತಪ್ಪಿ ಹೋಗುತ್ತಿದೆ. ಇದಕ್ಕೆ ಕಡಿವಾಣ ಹಾಕೋದು ಯಾರು? ನಾನು ಹೀಗಾಗಿ ಖಾಸಗಿ ಬಿಲ್ ಮಂಡಿಸುತ್ತೇನೆ ಎಂದು ರವಿಕುಮಾರ್‌ ತಿಳಿಸಿದ್ದಾರೆ. 

Video Top Stories