Asianet Suvarna News Asianet Suvarna News
breaking news image

ಚುನಾವಣೆಗೆ ಕಾಂಗ್ರೆಸ್ ನಮ್ಮ ರಾಜ್ಯವನ್ನು ಎಟಿಎಂ ಮಾಡಿಕೊಂಡಿದೆ: ಆರ್‌. ಅಶೋಕ್‌

ಬೆಂಗಳೂರಿನಲ್ಲಿ ನಡೆದ ‌ಮಹಾ  ಘಟಬಂದನ್ ಸಭೆಗೆ ಅಧಿಕಾರಿಗಳನ್ನ ಸರ್ಕಾರ ದುರ್ಬಳಕೆ ‌ಮಾಡಿಕೊಂಡಿದೆ. ಜನರ ತೆರಿಗೆ ಹಣವನ್ನ ಉಪಯೋಗಿಸಿಕೊಂಡಿದ್ದಾರೆ ಎಂದು ಆರ್‌ ಅಶೋಕ್ ಆರೋಪಿಸಿದ್ದಾರೆ.

ಬೆಂಗಳೂರು (ಜು.18): ಬೆಂಗಳೂರಿನಲ್ಲಿ ನಡೆದ ‌ಮಹಾ  ಘಟಬಂದನ್ ಸಭೆಗೆ ಅಧಿಕಾರಿಗಳನ್ನ ಸರ್ಕಾರ ದುರ್ಬಳಕೆ ‌ಮಾಡಿಕೊಂಡಿದೆ. ಜನರ ತೆರಿಗೆ ಹಣವನ್ನ ಉಪಯೋಗಿಸಿಕೊಂಡಿದ್ದಾರೆ. ಬಡವರ ದುಡ್ಡಿನಲ್ಲಿ‌ ಕಾಂಗ್ರೆಸ್ ‌ಮೋಜು ಮಸ್ತಿ‌ ಮಾಡುತ್ತಿದೆ. ಈ ಸಭೆ ಬರೀ ಪೋಟೋ ಶೂಟ್ ಅಷ್ಟೇ ಸಿಮೀತ. ಮುಂದಿನ ನಾಲ್ಕು ರಾಜ್ಯಗಳಲ್ಲಿ ನಡೆಯುವ ಚುನಾವಣೆಗೆ ಕಾಂಗ್ರೆಸ್ ನಮ್ಮ ರಾಜ್ಯವನ್ನು ಎಟಿಎಂ ಮಾಡಿಕೊಂಡಿದೆ. ಇವರ ದೊಂಬರಾಟ ಆಡೋದಕ್ಕೆ ಜನರ ದುಡ್ಡು ಬಳಸಿಕೊಂಡಿದ್ದಾರೆ. ಇವರು ಜನರ ಕ್ಷಮೆ ಕೇಳಬೇಕು. ಇನ್ನು ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್ ನವರು ಪಾದಯಾತ್ರೆ ‌ಮಾಡಿದ್ರು. ಈಗ ರಾಜ್ಯಕ್ಕೆ ತಮಿಳುನಾಡು ಸಿಎಂ ಸ್ಟಾಲಿನ್ ಬಂದಿದ್ದಾರೆ. ಮೇಕೆದಾಟು‌ ಚಾಲನೆ ಮಾಡಲಿಕ್ಕೆ ನಿಮಗೇನು ದಾಡಿ ಅಂತ ನಮ್ಮನ್ನ ಕೇಳಿದ್ರು. ಈಗ ನಾನು ಕೇಳ್ತಾ ಇದೀನಿ ನಿಮಗೇನು ದಾಡಿ ಅಂತ. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಮಾಡಿದ್ದು ಬರೀ ನಾಟಕ. ಈಗ ಕೇಳಿ ಸ್ಟಾಲಿನ್  ಬಳಿ ಮೇಕೆದಾಟು ಯೋಜನೆ ಜಾರಿ ಕುರಿತು ಮಾತನಾಡಿ. ಕಾಂಗ್ರೆಸ್ ಒಂದು ದೊಡ್ಡ ನಾಟಕ ಕಂಪನಿ ಎಂದು ಮಾಜಿ ಸಚಿವ ಆರ್‌.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

Video Top Stories