Asianet Suvarna News Asianet Suvarna News

News Hour: ಸಿಎಂ ನಿವಾಸಕ್ಕೆ ತೆರಳಿ ಈಶ್ವರಪ್ಪ ರಾಜೀನಾಮೆ,ಯಾರಿಗೆ ಮಂತ್ರಿಗಿರಿ?

* ರಾಜೀನಾಮೆ ಬೇಡವೇ ಬೇಡ.. ಬೆಂಬಲಿಗರ ಆಕ್ರೋಶ
* ಸಿಂಗಲ್ ಲೈನ್ ರಾಜೀನಾಮೆ ಕೊಟ್ಟ ಈಶ್ವರಪ್ಪ
* ಎಲ್ಲ ಆರೋಪಗಳಿಂದ ಮುಕ್ತನಾಗುವೆ, ಈಶ್ವರಪ್ಪ ಗುಡುಗು
*ಈಶ್ವರಪ್ಪ ಪರ ಬಿಜೆಪಿ ನಾಯಕರ ಬ್ಯಾಟಿಂಗ್

First Published Apr 15, 2022, 11:18 PM IST | Last Updated Apr 15, 2022, 11:20 PM IST

ಬೆಂಗಳೂರು(ಏ. 15)  ಗುತ್ತಿಗೆದಾರ ಸಂತೋಷ್ (Santosh Patil Suicide) ಆತ್ಮಹತ್ಯೆ  ನಂತರದ ಬೆಳವಣಿಗೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಈಶ್ವರಪ್ಪ(KS Eshwarappa)  ಮುಂದಾದಾಗ ಬೆಂಬಲಿಗರು ಆಕ್ರೋಶ ಹೊರಹಾಕಿದರು.  ಸಚಿವ ಸ್ಥಾನಕ್ಕೆ  ಕೆಎಸ್ ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯೊಂದಿಗೆ ಮೊಮ್ಮಗಳ ಆಮಂತ್ರಣ ಪತ್ರವನ್ನು ನೀಡಿದ್ದಾರೆ. 

ಸಂತೋಷ್ ಆತ್ಮಹತ್ಯೆ: ಕ್ಷೇತ್ರದಲ್ಲಿ ನಡೆಸಿದ ಕಾಮಗಾರಿ ಗೊತ್ತಿರಲಿಲ್ಲವೇ? ಹೆಬ್ಬಾಳ್ಕರ್‌ಗೆ ನಿರಾಣಿ ಪ್ರಶ್ನೆ

ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಎಲ್ಲ ಆರೋಪಗಳಿಂದ ಮುಕ್ತನಾಗಿ ಹೊರಗೆ ಬರುತ್ತೇನೆ ಎಂದು ಕೆಎಸ್ ಈಶ್ವರಪ್ಪ ರಾಜೀನಾಮೆ ನಂತರ ಹೇಳಿದರು. ಕೆಎಸ್ ಈಶ್ವರಪ್ಪ ಮೇಲೆ ಬಂದಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು ಎಲ್ಲ ಆರೋಪಗಳಿಂದ ಕೆಎಸ್‌ಇ ಹೊರಗೆ ಬರಲಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.