Asianet Suvarna News Asianet Suvarna News

ಸ್ವಾತಂತ್ರ್ಯ ಬಳಿಕ ಮೊದಲ ಬಾರಿಗೆ ತಂಡಾ ಜನರಿಗೆ ಹಕ್ಕು ಪತ್ರ, ಮೋದಿಗೆ ಪ್ರಭು ಚವ್ಹಾಣ್ ಅಭಿನಂದನೆ!

ಈ ಹಿಂದಿನ ಎಲ್ಲಾ ಪಕ್ಷಗಳು ತಾಂಡ ಜನರನ್ನು ನಿರ್ಲಕ್ಷಿಸಿತ್ತು. ಆದರೆ ಬೆಜಿಪಿ ಸರ್ಕಾರ ಸ್ವಾತಂತ್ರ್ಯ ಬಳಿಕ ಇದೇ ಮೊದಲ ಬಾರಿಗೆ ಹಕ್ಕು ಪತ್ರ ನೀಡಿ ಸೌಲಭ್ಯವನ್ನು ತಲುಪಿಸಿದೆ ಎಂದು ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ. ಮೋದಿ ಕಾರ್ಯಕ್ರಮಲ್ಲಿ ಪ್ರಭು ಚವ್ಹಾಣ್ ಮಾಡಿದ ಭಾಷಣದ ವಿವರ ಇಲ್ಲಿದೆ.

ಸ್ವಾತಂತ್ರ್ಯ ಬಂದ ಬಳಿಕ ಇದುವರೆಗೂ ತಾಂಡ ಜನರ ಸಂಕಷ್ಟ ಕೇಳುವ ಗೋಜಿಗೆ ಈ ಹಿಂದಿನ ಯಾವುದೇ ಸರ್ಕಾರಗಳು ಹೋಗಿಲ್ಲ. ಆದರೆ ಇದೇ ಮೊದಲ ಬಾರಿಗೆ ಬಿಜೆಪಿ ಪ್ರಯತ್ನದಿಂದ ತಾಂಡ ಜನರಿಗೆ ಹಕ್ಕು ಪತ್ರ ಸಿಕ್ಕಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ. ಇಂದು ಕಲಬುರಗಿಯಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಮಾತನಾಡಿದ ಚವ್ಹಾಣ್, ತಾಂಡಾ ಜನರಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳು ಸಿಗಲಿದೆ. ತಾಂಡ ಜನರ ಅಭಿವೃದ್ಧಿಯನ್ನು ಬಿಜೆಪಿ ಮಾಡಲಿದೆ.  ಇದೇ ವೇಳೆ ತಂಡಾ ಜನರಿಗೆ ಹಕ್ಕು ಪತ್ರ ನೀಡಿದ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಧನ್ಯವಾದ ಅರ್ಪಿಸಿದ್ದಾರೆ. 
 

Video Top Stories